Saturday, April 27, 2024
spot_imgspot_img
spot_imgspot_img

ಜೂ.ಚಿರಂಜೀವಿಯನ್ನು ಜಗತ್ತಿಗೆ ಪರಿಚಯಿಸಿದ ಮೇಘನಾ ರಾಜ್

- Advertisement -G L Acharya panikkar
- Advertisement -

ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಜೂನಿಯರ್ ಚಿರುವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಜನರಿಗೆ ಇದೀಗ ಚಿರು ಪತ್ನಿ ಮೇಘನಾ ರಾಜ್ ಗಿಫ್ಟ್ ಕೊಟ್ಟಿದ್ದಾರೆ. ರಾತ್ರಿ 12 ಗಂಟೆಗೆ ಮೇಘನಾ ರಾಜ್ ಜೂನಿಯರ್ ಚಿರುವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ವಿಭಿನ್ನವಾಗಿರುವ ವಿಡಿಯೋವೊಂದನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಮೇಘನಾ ಜೂನಿಯರ್ ಚಿರುವನ್ನು ಸಿಂಬಾನೆಂದು ವಿಡಿಯೋದಲ್ಲಿ ತೋರಿಸಿ ಎಲ್ಲರಿಗೂ ಪರಿಚಯಿಸಿದ್ದಾರೆ. ಮೇಘನಾ ರಾಜ್ ಸರ್ಜಾ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿಬಂದಿದ್ದಾರೆ ಅಂತಾ ಅಭಿಮಾನಿಗಳು ಸಂಭ್ರಮಿಸಿದ್ದರು.

ಮೂರು ತಿಂಗಳಿನಿಂದ ಜೂನಿಯರ್ ಚಿರು ಮುಖವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ನಡುವಲ್ಲೇ ಮೇಘನಾ ರಾಜ್ ಸಪ್ರೈಸ್ ಕೊಟ್ಟಿದ್ದು, ಫೆ.14ರ ಮಧ್ಯರಾತ್ರಿ ತನ್ನ ಮಗನ ಮುಖದರ್ಶನ ಮಾಡಿಸಿದ್ದಾರೆ.ಮೇಘನಾ ಬಿಡುಗಡೆ ಮಾಡಿರುವ ವಿಡಿಯೋ ತುಂಬಾನೆ ವಿಭಿನ್ನವಾಗಿದೆ. ಮೇಘನರಾಜ್ ಸರ್ಜಾ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ನಿಂದ ಆರಂಭಗೊಳ್ಳುವ ವಿಡಿಯೋ ಜೂನಿಯರ್ ಚಿರು ಭರ್ಜರಿ ಎಂಟ್ರಿಯೊಂದಿಗೆ ಕೊನೆಗೊಳ್ಳುತ್ತೆ. ಚಿರು ಇಲ್ಲಾ ಅನ್ನೋ ನೋವು ಕಾಡುವ ಹೊತ್ತಲೇ ಜೂನಿಯರ್ ಎಂಟ್ರಿ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

- Advertisement -

Related news

error: Content is protected !!