- Advertisement -
- Advertisement -



ಕಡಬ: ಜ.25 ರಂದು ತಾಲೂಕಿನ ಅಲಂಕಾರು ಗ್ರಾಮದ ಸತೀಶ (36) ಅವರು ನೀಡಿದ ದೂರಿನ ಮೇರೆಗೆ, ಅವರ ತೋಟದಿಂದ ಅಡಿಕೆ ಕಳವು ಮಾಡಿಕೊಂಡು ಇಬ್ಬರು ವ್ಯಕ್ತಿಗಳು ಪರಾರಿಯಾಗಿರುವ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 11/2026 ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ, ಪ್ರಥಮ ಆರೋಪಿಯಾದ ಕಾಯಿಮಣ ಗ್ರಾಮದ ಜಯಂತ್ ಎಂ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮಾನ್ಯ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ದ್ವಿತೀಯ ಆರೋಪಿಯಾದ ಕಾಣಿಯೂರು ಗ್ರಾಮದ ಲಿಂಗಪ್ಪ (36) ಅವರು ಮಾನ್ಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ಇದೇ ವೇಳೆ ಕಳವು ಮಾಡಲಾಗಿದ್ದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement -








