- Advertisement -
- Advertisement -





ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬದ ಕಲಾರ ಬಳಿ ರಸ್ತೆ ಬದಿ ನಿಂತಿದ್ದ 81 ವರ್ಷದ ವೃದ್ಧೆಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕಡಬ ಗ್ರಾಮದ ಕಲಾರ ಪೆರ್ಲದಕೆರೆ ನಿವಾಸಿ ದಿ. ಕೃಷ್ಣಪ್ಪ ಭಂಡಾರಿ ಅವರ ಪತ್ನಿ ವಾರಿಜಾ(81) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ವಾರಿಜಾ ಅವರು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಕಡಬ ಕಡೆಯಿಂದ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ವಾರಿಜಾ ಅವರಿಗೆ ಪತಿ ಹಾಗೂ ಮಕ್ಕಳಿಲ್ಲ. ಪೆರ್ಲದಕೆರೆಯಲ್ಲಿರುವ ಅಕ್ಕನ ಮನೆ ಸಮೀಪ ವಾಸವಿದ್ದ ಅವರನ್ನು ಅಕ್ಕನ ಮಗ ಧನಂಜಯ ಅವರು ನೋಡಿಕೊಳ್ಳುತ್ತಿದ್ದರು ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








