Monday, July 20, 2026
spot_imgspot_img
spot_imgspot_img

ಕಡೇಶಿವಾಲಯದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರೋತ್ಸವಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ: ಕಡೇಶಿವಾಲಯ ಗ್ರಾಮದ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಏಪ್ರಿಲ್ 1ರಿಂದ ಆರಂಭಗೊಂಡಿದ್ದು, ಏಪ್ರಿಲ್ 23ರವರೆಗೆ ನಡೆಯಲಿದೆ.


ಜಾತ್ರೋತ್ಸವದ ಅಂಗವಾಗಿ ಏಪ್ರಿಲ್ 9ರಂದು ಧ್ವಜಾರೋಹಣ ನೆರವೇರಿದ್ದು, ಅದರೊಂದಿಗೆ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ವಿವಿಧ ಪೂಜೆ, ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರೆ ಏಪ್ರಿಲ್ 23ರಂದು ಸಂಪನ್ನವಾಗಲಿದೆ.


ಏಪ್ರಿಲ್ 17ರಂದು ದರ್ಶನ ಬಲಿ ದಿವಸ ನಡೆಯಲಿದ್ದು, ಉಪಹಾರ ಸೇವೆಯನ್ನು ಶ್ರೀ ಲಕ್ಷ್ಮೀನರಸಿಂಹ ಗೆಳೆಯರ ಬಳಗ (ರಿ.) ವಹಿಸಿಕೊಂಡಿದೆ. ಏಪ್ರಿಲ್ 21ರಂದು ಕವಾಟೋದ್ಘಾಟನೆ ಸಂದರ್ಭದಲ್ಲಿ ರೋಟರಿ ಸಮುದಾಯ ದಳದಿಂದ ಮಜ್ಜಿಗೆ ಸೇವೆ ಏರ್ಪಡಿಸಲಾಗಿದೆ.


ಜಾತ್ರೋತ್ಸವದ ಅಂಗವಾಗಿ ಪ್ರತಿದಿನವೂ ಅನ್ನಸಂತರ್ಪಣೆ ಸೇವೆ ಭಕ್ತರಿಂದ ಪ್ರಾಯೋಜಿತವಾಗಿದ್ದು, ಏಪ್ರಿಲ್ 19ರಂದು ಚಂದ್ರಮಂಡಲ ಉತ್ಸವ ನಡೆಯಲಿದೆ. ಏಪ್ರಿಲ್ 20ರಂದು ಮಹಾರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.
ಏಪ್ರಿಲ್ 21ರಂದು ಕವಾಟೋದ್ಘಾಟನೆ, ತುಲಾಭಾರ, ವಸಂತ ಸೇವೆ ಹಾಗೂ ಅವಗೃತ ಸ್ನಾನ ಕಾರ್ಯಕ್ರಮಗಳು ನಡೆಯಲಿವೆ.


ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಏಪ್ರಿಲ್ 19ರಂದು “ಶ್ರೀಕೃಷ್ಣಚರಿತಾಮೃತ” ಮತ್ತು “ಶ್ರೀವಿಷ್ಣುಲೀಲೆ” ಯಕ್ಷಗಾನ ಬಯಲಾಟ ನಡೆಯಲಿದೆ. ಏಪ್ರಿಲ್ 20ರಂದು ತುಳು ಹಾಸ್ಯ ನಾಟಕ ಮತ್ತು ಏಪ್ರಿಲ್ 21ರಂದು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಭಕ್ತರಿಗೆ ಮನವಿ ಮಾಡಿದೆ.

- Advertisement -

Related news

error: Content is protected !!