Saturday, April 20, 2024
spot_imgspot_img
spot_imgspot_img

ಬಂಟ್ವಾಳ: 30 ದಿವಸಗಳ “ಕೌಶಲ್ಯಾಭಿವೃದ್ಧಿ ತರಬೇತಿ” ಕಾರ್ಯಕ್ರಮಕ್ಕೆ ಚಾಲನೆ

- Advertisement -G L Acharya panikkar
- Advertisement -

ಬಂಟ್ವಾಳ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು, ಸಿಡಾಕ್, ಧಾರವಾಡ,
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ, ಬಂಟ್ವಾಳ ಮತ್ತು
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇವುಗಳ ಸಯುಂಕ್ತ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಉದ್ಯಮಶೀಲರಿಗಾಗಿ ನಡೆಯಲಿರುವ “30 ದಿವಸಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ” ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವೆ ಸಂಘದ “ಮರಾಟಿ ಭವನದಲ್ಲಿ” ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ – ಬಂಟ್ವಾಳ ಇದರ ಅಧ್ಯಕ್ಷರಾದ ಕೇಶವ ನಾಯ್ಕ್ ಇವರು ದೀಪಬೆಳಗಿಸುವುದರೊಂದಿಗೆ ಉದ್ಘಾಟಸಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇದರ ಅಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ,
ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕರಾದ ಅರವಿಂದ ಬಾಳೇರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ರಾಘವೇಂದ್ರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉದ್ದಿಮೆದಾರರ ಸಂಘ ಮಂಗಳೂರು ಇದರ ಸದಸ್ಯರಾದ ಶಿವಪ್ಪ ನಾಯ್ಕ ಬಾಯಿಲ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ (ಕರ್ನಾಟಕ ಸರಕಾರ) ಇದರ ಸದಸ್ಯರಾದ ಜಯರಾಮ ನಾಯ್ಕ ಕುಂಟ್ರಕಲ ಹಾಗೂ ಮರಾಟಿ ಯುವ ವೇದಿಕೆ ಬಂಟ್ವಾಳ ಇದರ ಉಪಾಧ್ಯಕ್ಷರಾದ ಜಯರಾಮ ನಾಯ್ಕ ನಗ್ರಿ ಇವರು ಉಪಸ್ಥಿತರಿದ್ದರು. ರಾಜೇಶ್ ನಾಯ್ಕ್ ಕಲ್ಲಡ್ಕ ಇದರ ನೇತೃತ್ವ ವಹಿಸಿದ್ದರು. ವಿಠ್ಠಲ್ ನಾಯ್ಕ್ ಬಾಳ್ತಿಲ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.

- Advertisement -

Related news

error: Content is protected !!