- Advertisement -
- Advertisement -
ಮಂಗಳೂರು :- ಮಂಗಳೂರು ನಾಗರಿಕರಿಗೆ ಕೊರೊನಾ ಸೋಂಕಿಂದ ಎಚ್ಚರಿಕೆಯಿಂದಿರಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ. ಮಂಗಳೂರಿನಲ್ಲಿ ಕೊರೊನಾ ಸೊಂಕು ಗಂಭೀರ ತಿರುವು ಪಡೆಯುತ್ತಿದೆ ಅಂತ ತನ್ನ ಫೇಸ್ ಬುಕ್ ನಲ್ಲಿ ಕಾಮತ್ ಬರೆದ್ದಿದಾರೆ.
ನಾವು ಜಾಗರೂಕರಾಗಿ ಪ್ರತೀ ಕ್ಷಣವೂ ಅಲರ್ಟ್ ಆಗಿರಬೇಕು ಹಾಗೂ ಮುಂದಿನ 30 ದಿನಗಳವರೆಗೆ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಇರಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಲು ಪ್ರಾರಂಭಿಸಿ ಮತ್ತು ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ,ನಿಮಗೆ ಕೊವೀಡ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ‘ ಆರೋಗ್ಯಸೇತು’ ಆ್ಯಪ್ ಬಳಸಿ ಅಂತ ಸಲಹೆ ಮಾಡಿದ್ದಾರೆ.
- Advertisement -