




“ರಾಹುಲ್ ಗಾಂಧಿ ಬಿಜೆಪಿಗೆ ಸೇರಿದರೆ ಅವರನ್ನು ಮದುವೆಯಾಗುತ್ತೇನೆ” ಎಂದು ಕಂಗನಾ ರಣಾವತ್ ಅವರು ಹೇಳಿದ್ದರು ಎಂದು ವರದಿಯಾಗಿದ್ದು, ಇಂಟರ್ನೆಟ್ನಲ್ಲಿ ತಕ್ಷಣವೇ ಈ ಮಾತು ವೈರಲ್ ಆಗಿದೆ.
ಈ ಕಮೆಂಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಜನರು ಇದು ವ್ಯಂಗ್ಯವೋ, ರಾಜಕೀಯ ಟೀಕೆಯೋ ಅಥವಾ ಕ್ಲಾಸಿಕ್ ಕಂಗನಾ ಶೈಲಿಯ ಡ್ರಾಮಾವೋ ಎಂದು ಚರ್ಚಿಸಿದರು. ತನ್ನ ನೇರ ಹೇಳಿಕೆಗಳಿಗೆ ಹೆಸರುವಾಸಿಯಾದ ಕಂಗನಾ ಆಗಾಗ್ಗೆ ವಿರೋಧ ಪಕ್ಷದ ನಾಯಕರ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸುತ್ತಾರೆ ಮತ್ತು ಈ ಬಾರಿಯೂ ಇದಕ್ಕೆ ಹೊರತಾಗಿರಲಿಲ್ಲ.
ಇದೇ ಹೇಳಿಕೆ ಬಗ್ಗೆ ಇದು ಅವರ ಒರಿಜಿನಲ್ ಹೇಳಿಕೆ ಅಲ್ಲ. ಅವರ ಮಾತುಗಳನ್ನು ತಿರುಚಲಾಗಿದೆ ಎನ್ನುವ ವರದಿಗಳೂ ಬಂದಿದ್ದು ಸದ್ಯ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ರೀತಿ ಕಂಗನಾ ಹೇಳಿಕೆ ಕೊಟ್ಟಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ.
ಕಂಗನಾ ರಣಾವತ್ ಇತ್ತೀಚೆಗೆ ದೀಪಿಕಾಗೆ ಬೆಂಬಲಿಸಿ, ದೀಪಿಕಾ ಪರವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು, ದೀಪಿಕಾ ಅವರ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇಂದಿನ ಸ್ಥಿತಿಯಲ್ಲಿ ಅವರು ತಮ್ಮ ಕೆಲಸದ ನಿಯಮಗಳನ್ನು ಸ್ವತಃ ನಿರ್ಧರಿಸುವ ಹಕ್ಕು ಹೊಂದಿದ್ದಾರೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಕಂಗನಾ ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. ಆರಂಭದಲ್ಲಿ ತಾವೂ ದೀಪಿಕಾ ಕೂಡ ದಿನಕ್ಕೆ 12ರಿಂದ 14 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಯಶಸ್ಸಿನ ಹಂಬಲ ಹೆಚ್ಚು ಇತ್ತು, ಈಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ವಿವರಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








