Friday, March 29, 2024
spot_imgspot_img
spot_imgspot_img

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ: ಶ್ರದ್ಧಾಕೇಂದ್ರಗಳು ಬೆಳೆದಾಗ ಊರಿಗೆ ಕ್ಷೇಮ,  ಬಾಲಾಲಯದಲ್ಲಿದ್ದ ದೇವರನ್ನು ದೇವಾಲಯದಲ್ಲಿ ಪ್ರತಿಷ್ಠೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಶ್ರೀಗಳ ಭವ್ಯ ದೃಷ್ಟಿಯಿಂದ ದಿವ್ಯ ಸೃಷ್ಠಿ ನಾಧ್ಯವಾಯಿತು. ಬ್ರಹ್ಮ ಕಲಶವೆಂದರೆ ತಾಳ್ಮೆ – ಸಂಯಮದ ಪರೀಕ್ಷೆಯಾಗಿದೆ. ಇದೀಗಾಗಲೇ ಆಮಂತ್ರಣ ಪತ್ರಿಕೆ ಬಿಡುಗಡೆ ಯಾಗಿದೆ. ಇನ್ನು ನಮ್ಮ ಜವಾಬ್ದಾರಿ ಹೆಚ್ಚಿದಂತೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ರವರು ಹೇಳಿದರು.

ಅವರು ಮಾ.20ರಂದು  ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಶ್ರೀ ಮಹಾಬಲ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಎ.25ರಿಂದ ಎ.30ರ ವರೆಗೆ  ನಡೆಯಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ನಮ್ಮ ಹಿಂದೂ ಸಮಾಜ ಐಕ್ಯಮತ್ಯದಿಂದ ಇರಬೇಕು. ಒಗ್ಗಟ್ಟಿನಿಂದಿದ್ದು ಯಾವುದನ್ನು ಜಯಿಸುವ ಹಟ ನಮ್ಮದಾಗಬೇಕು. ಅಪೇಕ್ಷೆ ಪಡದೆ ಮಾಡಿದ ಕೆಲಸದಲ್ಲಿ ಯಶಸ್ಸು ಖಂಡಿತಾ ಇದೆ. ದೈವ ದೇವರುಗಳ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸುಖ ಸಂತೋಷ ದ ಜೀವನ ನಮ್ಮದಾಗುತ್ತದೆ ಎಂದರು.

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿರವರು ಆಶೀರ್ವಾಚನ ನೀಡಿ ಶ್ರದ್ಧಾ ಕೇಂದ್ರಗಳ ಮೂಲಕ ಧರ್ಮ ಸಂಸ್ಥಾಪನೆಗೆ ಸಾಧ್ಯ. ಮಠ ಮಂದಿರಗಳ ಉನ್ನತಿಯೊಂದಿಗೆ  ಲೋಕೋದ್ದಾರ ಸಾಧ್ಯ.ಕ್ಷೇತ್ರಗಳ ಸೇವೆಯಿಂದ ಪುಣ್ಯಪ್ರಾಪ್ತಿ ಸಾಧ್ಯ. ಯಾವುದೇ ಕೆಲಸದಲ್ಲಿ ನಮ್ಮದೆಂಬ ಭಾವ ಬರಬೇಕು. ದೇವರಲ್ಲಿ ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಳ್ಳಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಾಹಾಬಲ ಸ್ವಾಮೀಜಿಯವರು ಆಶೀರ್ವಚನನೀಡಿ
ಕ್ಷೇತ್ರ ಇನ್ನಷ್ಟು ಬೆಳಗುವಂತಾಗಲಿ. ಈ ವರೆಗೆ ಎಲ್ಲರ ಸಹಕಾರ ನಮಗೆ ನೀಡಿದ್ದಾರೆ. ಇನ್ನು ಮುಂದೆಯೂ ಎಲ್ಲರ ಸಹಕಾರವನ್ನು  ಬಯಸುತ್ತೆವೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆ ತಾಯಿಯ ದಯೆಯೇ ಕಾರಣವಾಗಿದೆ. ಬ್ರಹ್ಮಕಲಶೋತ್ಸವಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ  ಜಯಂತ ನಡುಬೈಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶ್ರೀಧರ ಶೆಟ್ಟಿ ಗುಬ್ಯ, ಎಸ್.ಬಿ.ಕಣಿಯೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ನ ಅಧ್ಯಕ್ಷರಾದ  ಪದ್ಮನಾಭ ಪೂಜಾರಿ ಸಣ್ಣಗುತ್ತು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರ ಶೇಖರ ಕಣಿಯೂರು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!