Sunday, January 26, 2025
spot_imgspot_img
spot_imgspot_img

ಕಾರ್ಕಳ: ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿ ಅರೆಸ್ಟ್‌..!

- Advertisement -
- Advertisement -

ಕಾರ್ಕಳ:ಮೂಡುಬಿದಿರೆಯ ಮೂಡುಕೊಣಾಜೆ ಗ್ರಾಮದ ಕೈಕಂಜಿ ಪಡ್ಡು ಸೇತುವೆ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟಕ್ಕೆ ಮುಂದಾದ ವ್ಯಕ್ತಿಯೊಬ್ಬನನ್ನು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕೂವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್( 38) ಎಂದು ಗುರುತಿಸಲಾಗಿದೆ.

ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಪತ್ರಾಂಕಿತ ಅಧಿಕಾರಿಯವರು ಅಂಗ ಶೋಧನೆ ನಡೆಸಿದಾಗ ಆತನ ವಶದಲ್ಲಿದ್ದ ಒಟ್ಟು 900ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 3 ಪ್ರಕರಣ ದಾಖಲಾಗಿದ್ದು ಅಲ್ಲದೇ ಬೆಳ್ತಂಗಡಿ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿ ಇರುತ್ತದೆ ಎಂಬ ಮಾಹಿತಿ ಲಭಿಸಿದೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯಿಂದ ಸ್ವಾಧೀನ ಪಡಿಸಕೊಂಡ ಒಟ್ಟು 900ಗ್ರಾಂ ಗಾಂಜಾದ ಅಂದಾಜು ಮೌಲ್ಯ ರೂ. 22000 ಆಗಿರುತ್ತದೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ದಾರ್ಥ ಗೊಯಲ್ (ಕಾ&ಸು), ರವಿಶಂಕರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗ ಎಸಿಪಿ ಶ್ರೀಕಾಂತ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ರವರ ನೇತೃತ್ವದ ತಂಡ ಸಿದ್ದಪ್ಪ ನರನೂರ ಪೊಲೀಸ್ ಉಪ ನಿರೀಕ್ಷಕರು, ಎ ಎಸ್ ಐ ಪ್ರಶಾಂತ್, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಯಾಲ್ ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್ ಮತ್ತು ರಾಜೇಶ್, ನಾಗರಾಜ ಲಮಾಣಿ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

- Advertisement -

Related news

error: Content is protected !!