Thursday, June 18, 2026
spot_imgspot_img
spot_imgspot_img

ಕಾಸರಗೋಡು : ವೈದ್ಯ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು : ಯುವ ವೈದ್ಯೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬದಿಯಡ್ಕ ಸಮೀಪದ ಕನ್ಯಾಪಾಡಿ ಎಂಬಲ್ಲಿ ನಡೆದಿದೆ.

ಕನ್ಯಾಪಾಡಿ ಕರಿಗಟ್ಟಪಳ್ಳ ಗೋಪಾಲ ಕೃಷ್ಣ ಭಟ್’ರವರ ಪುತ್ರಿ ಜಿ.ಕೆ. ಪಲ್ಲವಿ(25) ಮೃತಪಟ್ಟವರು. ಸೋಮವಾರ ರಾತ್ರಿ ಕೋಣೆಯಲ್ಲಿ ಮಲಗಿದ್ದ ಪಲ್ಲವಿ ಮಂಗಳವಾರ ಬೆಳಿಗ್ಗೆ ತಡವಾದರೂ ಹೊರಬಾರದೆ ಇದ್ದುದರಿಂದ ಸಂಶಯಗೊಂಡು ಮನೆಯವರು ಗಮನಿಸಿದಾಗ ನೇಣು ಬಿಗಿದು ಮೃತಪಟ್ಟಿರುವುದು ಕಂಡು ಬಂದಿದೆ. ಕಿಟಿಕಿಗೆ ಚೂಡಿದಾರ್‌ನ ಶಾಲು ಬಳಸಿ ನೇಣು ಬಿಗಿದಿರುವುದು ಪತ್ತೆಯಾಗಿದ್ದಾರೆ ಬದಿಯಡ್ಕ ಪೊಲೀಸರು ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮಂಗಳೂರಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದ ಪಲ್ಲವಿ ಕೆಲ ವರ್ಷಗಳಿಂದ ಸುಳ್ಯದಲ್ಲಿ ವೈದ್ಯ ತರಬೇತಿಗೆ ತೆರಳುತ್ತಿದ್ದರು. ಕೆಲ ದಿನಗಳಿಂದ ಮಾನಸಿಕ ಒತ್ತಡದಿಂದ ಮನೆಯಲ್ಲೇ ಉಳಿದು ಕೊಂಡಿದ್ದರು. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Related news

error: Content is protected !!