Tuesday, June 23, 2026
spot_imgspot_img
spot_imgspot_img

ಮಂಗಳೂರು – ತಿರುವನಂತಪುರ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಗ್ನಿ ಅವಘಡ- ತಪ್ಪಿದ ಭಾರಿ ಅನಾಹುತ!

- Advertisement -
- Advertisement -

ಕಾಸರಗೋಡು: ಮಂಗಳೂರು – ತಿರುವನಂತಪುರ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇಂದು ಬೆಳಗ್ಗೆ ಅಗ್ನಿ ಅನಾಹುತ ಉಂಟಾಗಿದೆ.

ರೈಲು ತಿರುವನಂತಪುರದ ವರ್ಕಳ ಎಂಬಲ್ಲಿಗೆ ತಲುಪಿತ್ತು. ಹೊಗೆಯನ್ನು ಗಮನಿಸಿದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಅಪಾಯದಿಂದ ತಪ್ಪಿಸಿದ್ದಾರೆ. ಪಾರ್ಸೆಲ್ ಬ್ಯಾಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಜೊತೆಗೆ ಪ್ರಯಾಣಿಕರು, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು.

ಬೆಂಕಿ ಹತ್ತಿಕೊಂಡ ಬೋಗಿಯನ್ನು ಬೇರ್ಪಡಿಸಿ, ಸುಲಭದಲ್ಲಿ ಬೆಂಕಿಯನ್ನು ನಂದಿಸಲಾಯಿತು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

- Advertisement -

Related news

error: Content is protected !!