Friday, April 19, 2024
spot_imgspot_img
spot_imgspot_img

ಗಂಡನಿಂದ ಹಲ್ಲೆಗೊಳಗಾಗಿ ಸಾವನಪ್ಪಿದ ಮಹಿಳೆ!

- Advertisement -G L Acharya panikkar
- Advertisement -

ಕಾಸರಗೋಡು: ಬೇಡಡ್ಕದಲ್ಲಿ ಗಂಡನ ಹೊಡೆತದಿಂದಾಗಿ ಪತ್ನಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತಪಟ್ಟವರು ಬೇಡಡ್ಕ ಕೊರತ್ತಿಕುಂಡು ಕಾಲನಿಯ ಸ್ಮಿತಾ(23). ಇವರ ಪತಿ ಅರುಣ್ ಕುಮಾರ್ ಆರೋಪಿಯಾಗಿದ್ದಾನೆ.

ಸೋಮವಾರ ರಾತ್ರಿ ಪತಿ ಅರುಣ್ ಕುಮಾರ್ ಪತ್ನಿ ಸ್ಮಿತಾರಿಗೆ ಹಲ್ಲೆ ನಡೆಸಿದ್ದು, ಈ ವೇಳೆ ಮಹಿಳೆ ಕಿರುಚಿದ ಧ್ವನಿ ಕೇಳಿ ಸ್ಥಳೀಯರು ಬಂದಾಗ ಹಲ್ಲೆಗೊಳಗಾದ ಸ್ಮಿತಾ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು. ತಕ್ಷಣವೇ ಸ್ಮಿತಾರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆಕೆ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಬೇಡಡ್ಕ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!