



ಕೇಪು :-ಯಕ್ಷಮಿತ್ರರು ಕೇಪು- ಅಳಿಕೆ ಇದರ ಆಶ್ರಯದಲ್ಲಿ ದಿನಾಂಕ 30-11-2025 ನೇ ಆದಿತ್ಯವಾರದಂದು ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಹಾಗೂ ಸೇವಾ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಯಕ್ಷಮಿತ್ರರು ಕೇಪು-ಅಳಿಕೆ ಇದರ ಆಶ್ರಯದಲ್ಲಿ 2019 ರ ವರೆಗೆ ಯಕ್ಷೋತ್ಸವ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿತ್ತು. ದಿವoಗತ ಅಶೋಕ ಇರಾಮೂಲೆ ಅವರ ಮುತುವರ್ಜಿಯಿಂದ ಬಹಳ ಯಶಸ್ವಿಯಾಗಿ 2019 ವರೆಗೆ ನಡೆಸಿಕೊಂಡು , ನಡೆಯುತ್ತಿತ್ತು. ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಯಕ್ಷ ಜಾತ್ರೆಗೆ ಈಗಿನ ಯಕ್ಷಮಿತ್ರರು ಕೇಪು-ಅಳಿಕೆ ಇದರ ಗೌರವಾಧ್ಯಕ್ಷರು ಪ್ರಕಾಶ್ ರೈ ಕಲ್ಲಂಗಳ ಹಾಗೂ ಇನ್ನಿತರ ಪದಾಧಿಕಾರಿಗಳ ಮುತುವರ್ಜಿ ಯಿಂದ ಮತ್ತೆ ಚಾಲನೆ ಸಿಕ್ಕಿದೆ. ಇತ್ತೀಚಿಗೆ ಹೊಸ ಸಮಿತಿಯೊಂದನ್ನು ರಚಿಸಿ ದಿನಾಂಕ 16-11-2025ರಂದು ಯಕ್ಷಗಾನ ಹಾಗೂ ಸೇವಾ ಗೌರವಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಯಕ್ಷಮಿತ್ರರು ಕೇಪು-ಅಳಿಕೆ ಇದರ ಗೌರವಾಧ್ಯಕ್ಷರಾಗಿ ಪ್ರಕಾಶ್ ರೈ ಕಲ್ಲಂಗಳ, ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್ಯದರ್ಶಿಯಾಗಿ ವಿಜಯಶಂಕರ ಆಳ್ವ ಮಿತ್ತಳಿಕೆ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಕಾರಂತ ಎರುಂಬು, ಸಂಘಟನಾ ಕಾರ್ಯದರ್ಶಿಯಾಗಿ ಜಗಜ್ಜೀವನ್ ರಾಮ್ ಶೆಟ್ಟಿ ಬೇಡೆಮಾರ್, ಪ್ರಧಾನ ಸಂಚಾಲಕರಾಗಿ ರಾಜಶೇಖರ ಶೆಟ್ಟಿ ತಾಳಿಪಡ್ಪು ಹಾಗೂ ಇನ್ನಿತರ ಪದಾಧಿಕಾರಿಗಳು ಕಾರ್ಯನಿರ್ವಹಿಸುತಿದ್ದಾರೆ.
ದಿನಾಂಕ 30-11-2025 ರಂದು ನಡೆಯುವ ಯಕ್ಷಗಾನ ಕಾರ್ಯಕ್ರಮದಲ್ಲಿ ಶ್ರೀ ಹನುಮಗಿರಿ ಮೇಳದ ಕಲಾವಿದರಿಂದ ವರ್ಣ ಪಲ್ಲಟ ಎಂಬ ನೂತನ ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಶ್ರೀಮತಿ ಕಮಲಾ, ಪರಿಚಾರಕರು, ಶ್ರೀ ಸುಬ್ರಾಯ ದೇವಸ್ಥಾನ ಕೇಪು ಮತ್ತು ಸೀತಾರಾಮ ಶೆಟ್ಟಿ ಮಡೇಲ, ನಿವೃತ್ತ ಪ್ರಸಾಧನ ಕಲಾವಿದರು ಕಟೀಲು ಮೇಳ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಕ್ಷೋತ್ಸವ ಕೇಪು ಕಾರ್ಯಕ್ರಮವನ್ನು ಆರಂಭಿಸಿದ ದಿವoಗತ ಅಶೋಕ ಇರಾಮೂಲೆಯವರ ಧರ್ಮಪತ್ನಿ ಕವಿತಾ ಇರಾಮೂಲೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬಹಳ ವರ್ಷದ ನಂತರ ಆಯೋಜನೆಗೊಂಡ ಈ ಅಪೂರ್ವ ಯಕ್ಷ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳ, ಯಕ್ಷ ಪ್ರೇಮಿಗಳ, ಯಕ್ಷ ಪೋಷಕರ ಸಹಕಾರಬೇಕು. ಮುಂದೆಯೂ ಇಂತಹ ಯಕ್ಷೋತ್ಸವ ವನ್ನು ಯಶಸ್ವಿಯಾಗಿ ನಡೆಸಬೇಕು ಎoಬುವುದು ಯಕ್ಷಮಿತ್ರರು ಕೇಪು- ಅಳಿಕೆ ಇವರ ಕಳಕಳಿ.








