- Advertisement -
- Advertisement -



ಕೇಪು: ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸನ್ನಿಧಿ- ಶಿವಕ್ಷೇತ್ರ-ಕೇಪು ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 22-3-2025ನೇ ಶನಿವಾರ ನಡೆಯಲಿದೆ.

ದಿನಾಂಕ: 22-3-2025ನೇ ಶನಿವಾರ ಬೆಳಿಗ್ಗೆ 6:00ರಿಂದ ರಾತ್ರಿ 12:00ರವರೆಗೆ ಶ್ರೀ ಕೈಲಾಸೇಶ್ವರ ದೇವರು ಹಾಗೂ ಪರಿವಾರ ದೇವರರಿಗೆ ಕಲಶಾಭಿಷೇ, ವಿಶೇಷ ಪೂಜೆ, ನಾಮ ಸ್ಮರಣೆ, “ಭಜನೆ” ಹಾಗೂ ರಾತ್ರಿ- ಶ್ರೀ ಅಯ್ಯಪ್ಪ ಸ್ವಾಮಿ ದೇವರ “ಪಡಿಪೂಜೆ” ನಡೆಯಲಿದೆ.
ಸಂಜೆ 6:00ರಿಂದ ವೇದಮೂರ್ತಿ ಶ್ರಿ ಸೂರ್ಯನಾರಾಯಣ ಕೇಕುಣ್ಣಾಯ-ಕೇಪು ಇವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಕಲ್ಪೋಕ್ತ ಪೂಜೆ ನಡೆಯಲಿದೆ. ರಾತ್ರಿ 8:30ರಿಂದ D.N.K. ಬಳಗ ಉಕ್ಕುಡ ಹಾಗೂ ಶ್ರೀ ಸ್ವಾಮಿ ಬಳಗ, ಸಂಕೇಶ-ಅಜ್ಜಿನಡ್ಕ ಹಾಗೂ ಸ್ಥಳೀಯ ಕಲಾಭಿಮಾನಿಗಳಿಂದ “ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ” ನಡೆಯಲಿದೆ.
- Advertisement -








