


ಕೇಪು: ಶ್ರೀ ದುರ್ಗಾ ಫ್ರೆಂಡ್ಸ್ ಕೇಪು, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಫೆಡರೇಶನ್ ಬಂಟ್ವಾಳ ತಾಲೂಕು ಮತ್ತು ತುಳುನಾಡ ಫೈಟರ್‍ಸ್ ಕೇಪು ಇದರ ಸಂಯುಕ್ತ ಆಶ್ರಯದಲ್ಲಿ ಹತ್ತನೇ ವರ್ಷದ ಗ್ರಾಮ ಸೀಮಿತ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು 60 ಕೆ.ಜಿ ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ದ.ಕ.ಜಿ.ಪಂ.ಜಿ.ಪ್ರಾ. ಶಾಲಾ ಕ್ರೀಡಾಂಗಣ ಕೇಪು ಇಲ್ಲಿ ನಡೆಯಿತು.

ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಎಸ್. ಸಾರಡ್ಕ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ಪಂದ್ಯಾಟದ ಉದ್ಘಾಟನೆಯನ್ನು ನೇರವೆರಿಸಿದರು. ಕಾರ್ಯಕ್ರಮದಲ್ಲಿ ಪ್ರಭಾಕರ ಶೆಟ್ಟಿ ದಂಬೆಕಾನ, ಅಡಿಕೆ ವ್ಯಾಪಾರಸ್ಥಗೋವಿಂದ ರಾಯ ಶೆಣೈ, ಕವಿತಾ ಅಶೋಕ್ ಇರಾಮೂಲೆ, ದ.ಕ.ಜಿ.ಪಂ.ಜಿ.ಪ್ರಾ. ಶಾಲೆ ಕೇಪು ಮುಖ್ಯೋಪಾಧ್ಯಾಯರು ಭಾಗೀರಥಿ, ಕೇಪು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಾಘವೇಂದ್ರ ಸ್ವಾಮಿ, ಕೇಪು ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಮುರಳೀಧರ ರೈ ಕೇಪುಗುತ್ತು, ಕೇಪು ಸುರಕ್ಷ ಮ್ಃಡ್ ಬ್ಲಾಕ್ ಸಾತ್ವಿಕ್ ಖಂಡೇರಿ ಕೃಷ್ಣರಾಜ್ ಕೊಳಚಪ್ಪು ಕಾರ್ಯಕ್ರಮದಲ್ಲಿ ಇವರ ಗೌರವ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀನಿವಾಸ ಗೌಡ ನೆಕ್ಕಿಲಾರುರವರಿಗೆ ಸನ್ಮಾನಿಸಲಾಯಿತು.
ಗ್ರಾಮ ಸೀಮಿತ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ: ಸಿ.ಎಫ್.ಸಿ ಒಕ್ಕೆತ್ತೂರು, ದ್ವಿತೀಯ: ಫ್ರೇಂಡ್ಸ್ ವಿಟ್ಲ, ತೃತೀಯ: ಹನುಮಾನ್ ಫ್ರೇಂಡ್ಸ್ ಪೆರುವಾಯಿ, ಚತುರ್ಥ: ಟೀಮ್ ಬ್ರದರ್‍ಸ್ ಧರ್ಮಸ್ಥಳ ತಂಡ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇದರೊಂದಿಗೆ ಅತ್ಯುತ್ತಮ ದಾಳಿಗಾರ: ರಾಕೇಶ್, ಅತ್ಯುತ್ತಮ ಹಿಡಿತಗಾರ: ಶಶಾಂಕ್, ಸವ್ಯಸಾಚಿ: ಸಯ್ಯೂಬ್ ಇವರುಗಳು ಬಹುಮಾನ ಪಡೆದುಕೊಂಡಿದ್ದಾರೆ.
60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ: ತುಳುನಾಡ ಫೈಟರ್‍ಸ್ ಕೇಪು, ದ್ವಿತೀಯ: ಬ್ರದರ್‍ಸ್ ಕೇಪು, ತೃತೀಯ: ಕುತ್ಯಾಳ ಶ್ರೀ ಕೂಡ್ಲು, ಚತುರ್ಥ: ಭಾರ್ಗವ ವಾರಿಯರ್‍ಸ್ ತಂಡ ಬಹುಮಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಅತ್ಯುತ್ತಮ ದಾಳಿಗಾರ: ರಾಜೇಶ್, ಅತ್ಯುತ್ತಮ ಹಿಡಿತಗಾರ: ಅನಿಲ್, ಸವ್ಯಸಾಚಿ: ಸುನಿಲ್ ಇವರುಗಳು ಬಹುಮಾನ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮವನ್ನು ಸುರೇಶ್ ಶೆಟ್ಟಿ ಪಡಿಬಾಗಿಲು ಸ್ವಾಗತಿಸಿದರು, ಸುಶಿತ್ ಕೇಪು ಧನ್ಯವಾದಗೈದರು, ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಸುದಾಕರ ಬಡೆಕೋಡಿ ಸಹಕರಿಸಿದರು.








