Friday, March 29, 2024
spot_imgspot_img
spot_imgspot_img

ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

- Advertisement -G L Acharya panikkar
- Advertisement -

ಕೋಯಿಕ್ಕೋಡ್: ನಿಲ್ಲಿಸಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಚೆವಯೂರ್ ನಲ್ಲಿ ನಡೆದಿದೆ.

ಆರೋಪಿಗಳನ್ನು ಕುನ್ನಮಂಗಲಂ ನಿವಾಸಿಗಳಾದ ಗೋಪಿಶ್ ಮತ್ತು ಮೊಹಮದ್ ಶಮೀರ್ ಎಂದು ಗುರುತಿಸಲಾಗಿದೆ. ಇಂದ್ರೇಶ್ ಎಂಬ ಮತ್ತೊಬ್ಬ ಆರೋಪಿ ಕೂಡ 21 ವರ್ಷದ ಮಾನಸಿಕ ಅಸ್ವಸ್ಥೆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪೋಷಕರೊಂದಿಗೆ ಜಗಳವಾಡಿದ ಮಹಿಳೆ ತನ್ನ ದ್ವಿಚಕ್ರ ವಾಹನದಲ್ಲಿ ತಿರುಗಾಡಿ ವಯಲ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಈ ವೇಳೆ ಗೋಪಿಶ್ ಮತ್ತು ಶಮೀರ್ ನಿಲ್ದಾಣದಲ್ಲಿದ್ದ ಆಕೆಯನ್ನು ಗಮನಿಸಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಗಳು ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಕೊಟ್ಟಂಪರಂಬಕ್ಕೆ ಕರೆದುಕೊಂಡು ಹೋಗಿ ಲಾಕ್ಡೌನ್ ಕಾರಣ ನಿಲ್ಲಿಸಿದ್ದ ಬಸ್ ನಲ್ಲಿ ಆಕೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

driving

ಕನ್ನಮಂಗಲ ಆಟೋ ನಿಲ್ದಾಣದ ಬಳಿ ಮಹಿಳೆಯನ್ನು ಬಿಟ್ಟು ಹೊರಟುಹೋಗಿದ್ದಾರೆ. ಮನೆಗೆ ಹೋದ ಮಹಿಳೆ ಲೈಂಗಿಕ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಪೋಷಕರು ಚೆವಯೂರ್ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಇಂದ್ರೇಶ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

- Advertisement -

Related news

error: Content is protected !!