Saturday, April 20, 2024
spot_imgspot_img
spot_imgspot_img

ಕೇರಳದಲ್ಲಿ ಮತ್ತೆ 1 ವಾರ ಲಾಕ್‍ಡೌನ್ ವಿಸ್ತರಣೆ

- Advertisement -G L Acharya panikkar
- Advertisement -

ತಿರುವನಂತಪುರ: ಕೇರಳದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್‍ಡೌನನ್ನು 1 ವಾರ ಕಾಲ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ಕೇರಳದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ಮೇ 8ರಿಂದ 16ರವರೆಗೆ ಲಾಕ್‍ಡೌನ್ ಘೋಷಿಸಿತ್ತು.

ಆದರೆ ಲಾಕ್‍ಡೌನ್ ಇದ್ದರೂ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ 1 ವಾರ ಕಾಲ ವಿಸ್ತರಣೆ ಮಾಡಿದ್ದು, ಮೇ 23ರವರೆಗೆ ಲಾಕ್‍ಡೌನ್ ಜಾರಿಯಲ್ಲಿರಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಟ್ರಿಪಲ್ ಲಾಕ್‍ಡೌನ್: ತಿರುವನಂತಪುರ, ತ್ರಿಶೂರ್, ಎರ್ನಾಕುಳಂ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಟ್ರಿಪಲ್ ಲಾಕ್‍ಡೌನ್ ಮಾಡಲಾಗುವುದು. ಕೋವಿಡ್ ಹರಡುವಿಕೆ ತಡೆಯಲು ಮತ್ತಷ್ಟು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಈ ನಾಲ್ಕು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಈ ಕ್ರಮ ಅನಿವಾರ್ಯ ಎಂದು ಸಿಎಂ ಹೇಳಿದರು

- Advertisement -

Related news

error: Content is protected !!