Saturday, June 13, 2026
spot_imgspot_img
spot_imgspot_img

ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ..!

- Advertisement -
- Advertisement -

ಅಬು ಧಾಬಿ: ಕೇರಳದ ಮಹಿಳೆಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿದ್ದು, ಮೃತ ಮಹಿಳೆ ಕುಟುಂಬಸ್ಥರು ಆಕೆಗೆ ಪತಿಯು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿದ್ದಾರೆ.

ಮೃತಪಟ್ಟ ಮಹಿಳೆಯನ್ನು ಕೇರಳದ ಕೊಲ್ಲಂ ಮೂಲದ ಅತುಲ್ಯ ಶೇಖರ್ (29) ಎಂದು ಗುರುತಿಸಲಾಗಿದೆ.

2014ರಲ್ಲಿ ಅತುಲ್ಯ ಕೊಲ್ಲಂ ನಿವಾಸಿ ಶೇಖರ್ ಎಂಬವರನ್ನು ಮದುವೆಯಾಗಿ ಶಾರ್ಜಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದರು. ಮದುವೆ ವೇಳೆ ಸತೀಶ್‌ಗೆ 320 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಅನ್ನು ವರದಕ್ಷಿಣೆಯಾಗಿ ಅತುಲ್ಯ ಮನೆಯವರು ನೀಡಿದ್ದರು. ಆದರೆ ಮದುವೆಯಾದಾಗಿನಿಂದ ಪತಿ ಸತೀಶ್ ಅತುಲ್ಯಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ಅತುಲ್ಯಳನ್ನು ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಅತುಲ್ಯ ತಾಯಿ ಆರೋಪಿಸಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪತಿ ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!