Thursday, July 9, 2026
spot_imgspot_img
spot_imgspot_img

ಬಿಜೆಪಿಯ ಒಬ್ಬ ಲೀಡರ್ ನ ಮಗನೂ ಆರ್.ಎಸ್.ಎಸ್ ನಲ್ಲಿ ಪೂರ್ಣ ಪ್ರಚಾರಕನಾಗಿಲ್ಲ: ಪ್ರಿಯಾಂಕ್‌ ಖರ್ಗೆ ಕಿಡಿ

- Advertisement -
- Advertisement -

ಬೆಂಗಳೂರು: ಬಿಜೆಪಿಯ ಒಬ್ಬ ಲೀಡರ್ ಮಗನೂ ಆರ್.ಎಸ್.ಎಸ್ ನಲ್ಲಿ ಪೂರ್ಣ ಪ್ರಚಾರಕರಾಗಿಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಕೊಲೆ ಕೇಸ್ ನಲ್ಲಿ ಜೈಲಿಗೆ ಹೋದವರಿಗೆ ಸಂಘ ಪರಿವಾರದವರು ಸಹಾಯ ಮಾಡ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ನಾನು ಹೇಳ್ತಾ ಇದ್ದೆ. ಈಗ ಅವರೇ ಹೇಳ್ತಾ ಇದ್ದಾರಾ? ನಾನು ಮುಂಚೆ ಇಂದ ಇದೇ ಹೇಳ್ತಾ ಇದ್ದೀನಿ. ಶಾಲು, ಗೋಶಾಲೆಗೆ ಹೋಗಬೇಕು ಅನ್ನೋದು, ಧರ್ಮ ರಕ್ಷಣೆ, ಗೋ ರಕ್ಷಣೆಗೆ ಬಿಡೋದು ಬಡವರ ಮಕ್ಕಳಿಗೆ. ಇವರ ಮಕ್ಕಳ ಏನ್ ಮಾಡ್ತಾ ಇದ್ದಾರೆ. ಒಬ್ಬ ಬಿಜೆಪಿ ಲೀಡರ್ ಮಗ RSS ನ ಪೂರ್ಣ ಪ್ರಚಾರಕರು ಇದ್ದರೆ ತೋರಿಸಿ ನೋಡೋಣ ಎಂದು ಕಿಡಿಕಾರಿದರು.

ಫುಲ್ ಟೈಂ ಪ್ರಚಾರಕರನ್ನು ಒಬ್ಬ ಬಿಜೆಪಿ ನಾಯಕರ ಮಗನನ್ನ ತೋರಿಸಿ. ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು. ಕೋಮು ಗಲಭೆಯಲ್ಲಿ ಯಾರು ಸಾಯ್ತಾ ಇದ್ದಾರೆ. ಇವರು ಮಕ್ಕಳ ಹೋಗ್ತಾರಾ? ಪರೇಶ್ ಮೆಸ್ತಾ ಹೆಸರಲ್ಲಿ ಚುನಾವಣೆ ಗೆದ್ರು. ಅವರ ಮನೆಗೆ ಇವರು ಹೋಗಿದ್ದಾರಾ? ಎಷ್ಟೋ ಜನ ತೀರಿ ಹೋದ್ರು. 22,26,28 ವರ್ಷದವರು ತೀರಿ ಹೋದ್ರು. ಈಗಲಾದ್ರು ಯುವಕರು ಜಾಗೃತಿರಾಗಿ ಉದ್ಯೋಗ ಹುಡುಕಿ ಕುಟುಂಬಕ್ಕೆ ನೆರವಾಗಿ ಅಂತ ಕರೆ ಕೊಟ್ಟರು.

ಕೋಮು ಗಲಭೆಗೆ ನಿಮ್ಮನ್ನ ಉಪಯೋಗ ಮಾಡಿಕೊಳ್ತಿದ್ದಾರೆ. ದಲಿತರು, ಹಿಂದುಳಿದವರನ್ನ ಬಳಕೆ ಮಾಡಿಕೊಳ್ತಾ ಇದ್ದಾರೆ. RSS ಅವರು ರೈತರ ಪರ ಪ್ರತಿಭಟನೆ ಮಾಡಿದ್ದಾರಾ? ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿದ್ದಾರಾ? ಇಂತಹದ್ದಕ್ಕೆ ಮಾತ್ರ ಪ್ರಚೋದನೆ‌ ಕೊಡ್ತಾರೆ. ಯುವಕರಿಗೆ ಹೇಳ್ತೀನಿ ಆ ತಂಟೆಗೆ ಹೋಗಬೇಡಿ.
ಬಿಜೆಪಿ, ಸಂಘ ಪರಿವಾರದ ಮಕ್ಕಳು ಅದರಲ್ಲಿ ಇಲ್ಲ. ನಿಮ್ಮನ್ನ ಈ ನರಕಕ್ಕೆ ತಳ್ಳುತ್ತಾರೆ. ನರಕಕ್ಕೆ ತಳ್ಳಿದ ಮೇಲೆ ನಿಮ್ಮ ಸಹಾಯಕ್ಕೆ ಯಾರು ಬರಲ್ಲ. ನನಗೆ ಬೆದರಿಗೆ ಹಾಕಿದ ಯುವಕನಿಗೆ ಲಾಯರ್ ಕೂಡಾ ಇವರು ಕೊಟ್ಟಿಲ್ಲ. ಅವರ ತಾಯಿ ಫೋನ್ ಮಾಡಿದ್ದಕ್ಕೆ ಬಿಟ್ಟೆ. ನೊಂದವರ ಮನೆಗೆ ಇವರು ಹೋಗಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಯುವಕರು ಬೇಕು. ಮಹೇಂದ್ರ ಕುಮಾರ್ ಹೇಳ್ತಾ ಇದ್ದರು ರಕ್ತಪಿಪಾಸುಗಳು ಅಂತಿದ್ದರು. ಇದನ್ನ ಎಷ್ಟು ಬೇಗ ತಿಳಿದಿಕೊಳ್ತೀವಿ ಅಷ್ಟು ಒಳ್ಳೆಯದು ಎಂದು ಯುವಕರಿಗೆ ಸಲಹೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!