- Advertisement -
- Advertisement -
ವಿಟ್ಲ: ಕುಲಾಲ ಸಂಘ ವಿಟ್ಲ ಇದರ ನೂತನ ಸಭಾಭವನ ‘ ಕುಲಾಲ ರಜತ ಭವನ’ ಉದ್ಘಾಟನೆ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ವಿಟ್ಲ ಕುಲಾಲ ರಜತ ಟ್ರೋಫಿ 2024 ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸ್ವಜಾತಿ ಬಾಂಧವರ ಮತ್ತು ಮಕ್ಕಳ ಕ್ರೀಡೋತ್ಸವ ವಿಟ್ಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಈ ಕ್ರೀಡೋತ್ಸವವನ್ನು ನಿವೃತ್ತ ಬಿ ಎಸ್ ಎನ್ ಎಲ್ ಇಂಜಿನೀಯರ್ ಗೋಪಾಲ ಕುಲಾಲ್ ಸಾಲೆತ್ತೂರು ಉದ್ಘಾಟಿಸಿದರು. ದೀಪಪ್ರಜ್ವಲನೆ ಪೂವಪ್ಪ ಮೂಲ್ಯ ಬಾಲೆಕುಮೇರಿ ಪುಣಚ, ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಳ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ, ರಾಜೀವಿ ಎಂ ಕೆ ಕುಲಾಲ್ ಇರಂದೂರು, ಇಂದುಶೇಖರ ಕುಳಾಲು, ಪ್ರವೀಣ್ ಚಂದಳಿಕೆ ಮತ್ತು ಸುಚಿತ್ರ ರಮಾನಾಥ ವಿಟ್ಲ ಇವರು ಭಾಗವಹಿಸಿದ್ದರು. ರಮಾನಾಥ ವಿಟ್ಲ ಸ್ವಾಗತಿಸಿದರು. ವೀರಪ್ಪ ಮೂಲ್ಯ ಪುಣಚ ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು.
- Advertisement -