Thursday, April 25, 2024
spot_imgspot_img
spot_imgspot_img

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಸುದ್ದಿಗೋಷ್ಠಿ

- Advertisement -G L Acharya panikkar
- Advertisement -

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾಮಹೋತ್ಸವವು ಫೆ.12 ಮತ್ತು 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ ಎಂದು ಕೃಷ್ಣಯ್ಯ ಕೆ ಹೇಳಿದರು.

ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಫೆ.5ರಂದು ಗೊನೆ ಮುಹೂರ್ತ, ಫೆ.10 ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಸ್ಥಳ ಶುದ್ದಿ, 12 ಕಾಯಿ ಗಣಪತಿ ಹವನ, ನವಕ ಪ್ರಧಾನ ಕಲಶ, ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸಹಿತ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ರಂಗಪೂಜೆಯು ನಡೆಯಲಿದೆ ಎಂದು ತಿಳಿಸಿದರು.

ಫೆ.12 ರಂದು ಬೆಳಗ್ಗೆ ದೇವರ ಮೂಲಸ್ಥಳ ಕುಂಡಡ್ಕ ಬದಿಕೆರೆಯಿಂದ ಕಲಶ ತರುವುದು, ಬಳಿಕ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಹಾಲು ಅಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ, ನವಕ ಪ್ರಧಾನ ಕಲಶ, ಗಣಪತಿ ಹವನ, ಕುಂಕುಮಾರ್ಚನೆ, ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 6ಕ್ಕೆ ನಿತ್ಯ ಪೂಜೆ, 7ಕ್ಕೆ ಶ್ರೀ ದುರ್ಗಾಪೂಜೆ, 7.30ಕ್ಕೆ ಶ್ರೀ ರಂಗಪೂಜೆ, 8.30 ಕ್ಕೆ ಶ್ರೀದೇವರ ಬಲಿ ಉತ್ಸವ, ಕಟ್ಟೆ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಒಡಿಯೂರು ಸಾತ್ವಿಕತೇಜ ಕಲಾಕೇಂದ್ರದ ಸದಸ್ಯರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಬಯಲಾಟ ನಡೆಯಲಿದೆ.

ಫೆ.13 ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಉತ್ಸವ, ಬಳಿಕ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ ಮಾತನಾಡಿ ಈ ದೇವಸ್ಥಾನ ಬಹಳ ಪ್ರಾಚೀನ ಇತಿಹಾಸ ಹೊಂದಿದ್ದು, ದೇವಸ್ಥಾನದ ಜಾತ್ರೋತ್ಸವ, ನಿತ್ಯ ಕಾರ್ಯಗಳು ಕುಂಡಡ್ಕ ಮನೆತನದ ಹಿರಿತನದಲ್ಲಿ 1973ರಲ್ಲಿ ನಡೆಯುತ್ತಿತ್ತು. ಬಳಿಕ ಅರಮನೆಯವರ ಅನುಮತಿ ಮೇರೆಗೆ ಊರವರು ನಡೆಸುವಂತ ಸಂದರ್ಭ ಬಂದಿದೆ.

2015ರಲ್ಲಿ ಜೀರ್ಣೊದ್ದಾರಕ್ಕೆ ಮುಂದೂಡಿ ಇಟ್ಟಾಗ ಸೀಮೆ ಗುರಿಕಾರರಾದ ಕೆ.ಟಿ ವೆಂಕಟೇಶ್ ಭಟ್ ರ ವರ ನೇತೃತ್ವದಲ್ಲಿ ಜೀರ್ಣೋದ್ದಾರಗೊಂಡು 2019ರಲ್ಲಿ ಬ್ರಹ್ಮಕಲಶೋತ್ಸವ ಊರ ಪರವೂರ ಭಕ್ತರ ದಾನಿಗಳ, ಸಹಕಾರದಲ್ಲಿ ಬಹಳ ವೈಭವದಿಂದ ನಡೆದಿದೆ. ಇದೀಗ ಬ್ರಹ್ಮಕಲಶೋತ್ಸವ ಬಳಿಕ ಎರಡನೇ ವರ್ಷದ ಜಾತ್ರೋತ್ಸವ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೋಶಾಧಿಕಾರಿ ಕೃಷ್ಣಪ್ಪ ಗೌಡ ಅಡ್ಯಾಲು, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಪೆರುವಾಜೆ, ವಿಷ್ಣು ಮೂರ್ತಿ ಯುವಕ ವೃಂದ ಕಾರ್ಯಾಧ್ಯಕ್ಷ ಪ್ರಶಾಂತ ಶೆಟ್ಟಿ ಬರೆ ಉಪಸ್ಥಿತರಿದ್ದರು.

- Advertisement -

Related news

error: Content is protected !!