- Advertisement -
- Advertisement -





ಕುಂದಾಪುರ: ಬೈಕ್ ಹಾಗೂ ಲಾರಿ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಬೀಜಾಡಿಯಲ್ಲಿ ನಡೆದಿದೆ.
ಹಾವೇರಿ ಮೂಲದ ಕೂಲಿ ಕಾರ್ಮಿಕ ಪರಸಪ್ಪ ಚಂದಪ್ಪ ಲಮಾಣಿ(40) ಮೃತ ವ್ಯಕ್ತಿ. ಇವರು ತನ್ನ ಪತ್ನಿಯೊಂದಿಗೆ ಕಾಸರಗೋಡಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಇವರ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನಲೆ ಹಾವೇರಿಗೆ ಬೈಕ್ ನಲ್ಲಿ ಹೊರಟ್ಟಿದ್ದರು.
ಮಂಗಳೂರು ಕುಮುಟಾ ಮಾರ್ಗವಾಗಿ ಊರಿಗೆ ಹೊರಟ ಇವರ ಬೈಕ್ ಗೆ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಪರಸಪ್ಪ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕುಂದಾಪುರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
- Advertisement -








