ಪುತ್ತೂರು: ಇಂದು ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಕಛೇರಿಯಲ್ಲಿ ಕೊರೋನಾ ಸಂಕಷ್ಟ ಕಾಲದಲ್ಲಿ ಸೇವೆ ಸಲ್ಲಿಸಿದ ಗೃಹರಕ್ಷಕ ದಳ ಸಿಬ್ಬಂದಿಗಳು ಮತ್ತು ಮಾಧ್ಯಮ ಮಿತ್ರರಿಗೆ ಸುಮಾರು ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಪ್ರಾಂತ್ಯ VII ರ ಪ್ರಾಂತೀಯ ಅಧ್ಯಕ್ಷರಾಗಿರುವ ಕಾವು ಹೇಮನಾಥ್ ಶೆಟ್ಟಿಯವರು ಮಾತನಾಡಿ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭಗೊಂಡಿರುವ ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಸಂಕಷ್ಟಕ್ಕೆ ಒಳಗಾಗಿರುವ ಜನರ ಕಣ್ಣೀರು ಒರಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.


ಗೃಹರಕ್ಷಕ ದಳದ ಸಿಬ್ಬಂದಿಗಳು ಕನಿಷ್ಠ ಗೌರವಧನ ಪಡೆದು ನಿಸ್ವಾರ್ಥ ವಾಗಿ ಸೇವೆ ಮಾಡುತ್ತಿರುವ ವರ್ಗ ಇವರನ್ನು ಗುರುತಿಸಿ ಸಹಾಯ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಹೇಮನಾಥ್ ಶೆಟ್ಟಿಯವರು ಹೇಳಿದರು. ಹಾಗೆಯೇ ಮಾಧ್ಯಮ ಮಿತ್ರರೂ ಕೂಡಾ ಸಮಾಜದ ಸೇವೆ ಸಲ್ಲಿಸಿದ್ದಾರೆ ಎಂದರು.


ವಲಯ 1 ವಲಯಾಧ್ಯಕ್ಷರಾದ ಶಿವ ಪ್ರಸಾದ್ ಮಾತನಾಡಿ ಲಯನ್ಸ್ ಸಂಸ್ಥೆಯ ಈ ಕೆಲಸ ಅತೀ ಉತ್ತಮವಾದುದು ಇವರು ಸಮಾಜಕ್ಕೆ ಅತೀ ಹತ್ತಿರವಾಗಿರುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಿಟ್ ವಿತರಣೆ ಧನಸಹಾಯ ಮಾಡಿದ ಲಯನ್ ಮೋಹನ್ ನಾಯಕ್ ಮಾತನಾಡಿ ಸಣ್ಣ ಪುಟ್ಟ ಸಹಾಯವನ್ನು ಮಾಡುತ್ತಿದ್ದ ನನಗೆ ಈಗ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಗೆ ಸೇರಿ ನಿಮಗೆಲ್ಲ ಸಹಾಯ ಮಾಡಲು ಸಹಾಯ ಮಾಡಲು ಸಾಧ್ಯವಾಯಿತು ತುಂಬಾ ಖುಷಿಯಾಯಿಗೆ ಎಂದರು.


ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಐದು ತಿಂಗಳ ಹಿಂದೆ ಪ್ರಾರಂಭವಾಗಿರುವ ನಮ್ಮ ಸಂಸ್ಥೆಗೆ ನಮ್ಮ ಸದಸ್ಯರ ಬೆಂಬಲದಿಂದ ಇಂತಹ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಯಿತು. ಈ ಸಂಸ್ಥೆಯನ್ನು ಹುಟ್ಟು ಹಾಕಿದ ಕಾವು ಹೇಮನಾಥ್ ಶೆಟ್ಟಿ, ಮಾರ್ಗದರ್ಶನ ಮಾಡಿದ ಗಣೇಶ್ ಶೆಟ್ಟಿಯವರ ಸೇವೆ ಅನನ್ಯ ಎಂದು ಅಭಿಪ್ರಾಯಿಸಿದರು.


ಗೃಹ ರಕ್ಷಕದಳ ಸದಸ್ಯರ ಪರವಾಗಿ ಮಾತನಾಡಿದ ಸಂತೋಷ್ ಅವರು ನಮ್ಮ ಸದಸ್ಯರನ್ನು ಗುರುತಿಸಿ ಗೌರವಿಸುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಿಮ್ಮ ಸೇವೆಗೆ ಸದಾ ಋಣಿಯಾಗಿದ್ದೇವೆ. ನಿಮಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ ಎಂದು ಕೃತಜ್ಞತೆ ಹೇಳಿದರು.


ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು, ಕೋಶಾಧಿಕಾರಿ ಕೇಶವ ಬೆದ್ರಳ ವಂದಿಸಿದರು. ಜಿಲ್ಲಾ ಸಂಪುಟ ಸದಸ್ಯರಾಗಿರುವ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಉಪಾಧ್ಯಕ್ಷರಾಗಿರುವ ವಿಕ್ರಮ್ ಶೆಟ್ಟಿ, ದಾಮೋದರ್ ಭಂಡಾರ್ಕರ್, ಅನ್ವರ್ ಖಾಸಿಂ,ಬಶೀರ್ ಪರ್ಲಡ್ಕ, ಅಬೂಬಕ್ಕರ್ ಮುಲಾರ್, ನೇಮಾಕ್ಷ ಸುವರ್ಣ, ರವಿಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.











