- Advertisement -
- Advertisement -
ಮಂಗಳೂರು: ಲಯನ್ಸ್ ಜಿಲ್ಲೆ 317-D ವತಿಯಿಂದ ಕೊಡಗು,ಹಾಸನ, ಚಿಕ್ಕಮಂಗಳೂರು, ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಲಯನ್ಸ್ ಮತ್ತು ಲಿಯೋ ಸದಸ್ಯರಿಗೆ ಬ್ಯಾಡ್ಮಿಂಟನ್ ಪಂದ್ಯಾಟವು ಲಯನ್ಸ್ ಜಿಲ್ಲೆ ಮುಖ್ಯ ಕೋರ್ಡಿನೇಟರ್ ಲ| ರೋಷನ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ್ ಶೆಣೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.



ಈ ಕಾರ್ಯಕ್ರಮದಲಿ ಮುಖ್ಯ ಅತಿಥಿಯಾಗಿ ದೈಹಿಕ ನಿರ್ದೇಶಕರಾಗಿರುವ ಕಾವು ಪ್ರೇಮನಾಥ್ ಶೆಟ್ಟಿ ಶುಭಕೋರಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಉಪರಾಜ್ಯಪಾಲರದ ಗೋವರ್ಧನ್ ಶೆಟ್ಟಿ , ಕಾರ್ಯದರ್ಶಿ ಚಂದ್ರ ಗೌಡ , ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ , ರಾಜ್ಯಪಾಲರ ಕೋರ್ಡಿನೇಟರ್ ಜ್ಯೋತಿ ಶೆಟ್ಟಿ , ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಲಿಯೋ ಅಧ್ಯಕ್ಷೆ ಶ್ರೀನಿಧಿ ಶೆಟ್ಟಿ ಮತ್ತು ಈ ಕಾರ್ಯಕ್ರಮದ ಕೋರ್ಡಿನೇಟರ್ ಗಳು ಉಪಸ್ಥಿತರಿದರು. ಈ ಕಾರ್ಯಕ್ರಮವನ್ನು ವಿಜಯ ವಿಷ್ಣು ಮಯ್ಯ ನಿರೂಪಿಸಿ ಧನ್ಯವಾದ ನೀಡಿದರು.


- Advertisement -








