Thursday, March 28, 2024
spot_imgspot_img
spot_imgspot_img

ಪ್ರೇಮಿಗಳ ದಿನದಂದು ‘ಲವ್ ಮಾಕ್ಟೇಲ್’ ಜೋಡಿಯ ಕಲ್ಯಾಣ!!

- Advertisement -G L Acharya panikkar
- Advertisement -

ಬೆಂಗಳೂರು(ನ.4): ಕೆಲವು ವರ್ಷಗಳಿಂದ ಪ್ರೀತಿಸುತ್ತಿರುವ. ಲವ್ ಮಾಕ್ಟೇಲ್ ನ ಲವ್ ಬರ್ಡ್ಸ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪ್ರೇಮಿಗಳ ದಿನದಂದೇ ‘ಲವ್ ಮಾಕ್ಟೇಲ್’ ಜೋಡಿಯ ಕಲ್ಯಾಣ ನಿಗದಿಯಾಗಿದ್ದು. ಫೆಬ್ರವರಿ 14 ರಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನ ನಾಗರಾಜ್ ಅವರ ಮದುವೆ ನೆರವೇರಲಿದೆ.

ಮದರಂಗಿ ಕೃಷ್ಣ ಮದುವೆ ವಿಷಯವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೆಬ್ರವರಿ 14 ಅಂತ ಬರೆದಿರುವ ಹಾರ್ಟ್​ ಶೇಪ್ಡ್​ ಟೆಂಪ್ಲೇಟ್ಸ್​​ ಜೊತೆ ಪೋಟೋ ಪೋಸ್ಟ್​ ಮಾಡಿದ್ದಾರೆ. ಈ ತಾರಾ ಜೋಡಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದಾರೆ ಅಂತ ಹೇಳಲಾಗುತ್ತಿದೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ನಡೆಯಲಿದೆ ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ.
ಇಬ್ಬರೂ ‘ಲವ್​ ಮಾಕ್ಟೇಲ್​-2’ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು. ಈ ಸಿನಿಮಾವೂ ಮುಂದಿನ ವರ್ಷ ತೆರೆ ಕಾಣಲಿದೆ.

- Advertisement -

Related news

error: Content is protected !!