Monday, July 20, 2026
spot_imgspot_img
spot_imgspot_img

ಮಾಡತ್ತಡ್ಕದಲ್ಲಿ ಶ್ರೀ ಮಲರಾಯಿ– ಶ್ರೀ ಮೂವರ್ ದೈವಗಳ ನೇಮೋತ್ಸವ

- Advertisement -
- Advertisement -

ಧರ್ಮ ಜಾಗೃತಿ ಪ್ರಯುಕ್ತ ಯುವ ವಾಗ್ಮಿ,ಲೇಖಕಿ ಕುಮಾರಿ ಹಾರಿಕ ಮಂಜುನಾಥ್ದಿಕ್ಸೂಜಿ ಭಾಷಣ

ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು, ಮಾಡತ್ತಡ್ಕದಲ್ಲಿ ಶ್ರೀ ಮಲರಾಯಿ ಮತ್ತು ಶ್ರೀ ಮೂವರ್ ದೈವಗಳ ನೇಮೋತ್ಸವವು ಮಾರ್ಚ್ 4ರಿಂದ 6ರವರೆಗೆ ನಡೆಯಲಿದೆ. ಇದರ ಅಂಗವಾಗಿ ಶಿಬರಿಕಲ್ಲು–ಮಾಡ ಶ್ರೀ ಮಲರಾಯಿ ಮೂವರ್ ದೈವಂಗಳ ಸೇವಾ ಮಂಡಳಿ ಇವರ ಆಶ್ರಯದಲ್ಲಿ ಮಾರ್ಚ್ 5ರಂದು ಗುರುವಾರ ಸಂಜೆ 7 ಗಂಟೆಗೆ ಧರ್ಮ ಜಾಗೃತಿಯ ಪ್ರಯುಕ್ತ ದಿಕ್ಸೂಚಿ ಭಾಷಣ ಕಾರ್ಯಕ್ರಮ ಆಯೋಜಿಸಲಾಗಿದೆ.ಯುವ ವಾಗ್ಮಿ ಹಾಗೂ ಲೇಖಕಿ ಬೆಂಗಳೂರು ಕುಮಾರಿ ಹಾರಿಕ ಮಂಜುನಾಥ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.

ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ಶ್ರೀ ತುವಿನ್ ಕುಮಾರ್ ಮಾಡತ್ತಾರು ಅಧ್ಯಕ್ಷರು ಶಿಬರಿಕಲ್ಲು–ಮಾಡ ಶ್ರೀ ಮಲರಾಯಿ ಮೂವರ್ ದೈವಂಗಳ ಸೇವಾ ಮಂಡಳಿ, ಗೌರವ ಉಪಸ್ಥಿತಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದ.ಕ ಜಿಲ್ಲಾ, ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಕಿಶೋರ್ ಕುಮಾರ್ ಬೊಟ್ಯಾಡಿ ಶಾಸಕರು ಕರ್ನಾಟಕ ವಿಧಾನ ಪರಿಷತ್, ಮುಖ್ಯ ಅತಿಥಿಗಳು
ಕೃಷ್ಣಯ್ಯ ಅರಮನೆ ವಿಟ್ಲ, ಅರುಣ್ ಕುಮಾರ್ ಪುತ್ತಿಲ ಹಿಂದೂ ಮುಖಂಡರು,ವೇಣುಗೋಪಾಲ ಶೆಟ್ಟಿ ಮರುವಾಳ ಅಧ್ಯಕ್ಷರು ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ, ಪುನೀತ್ ಮಾಡತ್ತಾರು ಅಧ್ಯಕ್ಷರು ನೇಮೋತ್ಸವ ಸಮಿತಿ ಮಾಡತ್ತಡ್ಕ, ದಯಾನಂದ ಶೆಟ್ಟಿ ಉಜಿರೆಮಾರ್ ಅಧ್ಯಕ್ಷರು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ, ದೀಕ್ಷಿತ್ ಬೋಳಿಗದ್ದೆ ಅಧ್ಯಕ್ಷರು, ಶಿಬರಿ ಯುವಕ ಮಂಡಲ (ರಿ), ವಿನೋದ್ ಬೋಳಿಗದ್ದೆ ಅಧ್ಯಕ್ಷರು ಬಿಲ್ಲವ ಸಂಘ ಕುಂಡಡ್ಕ, ನೀಲಪ್ಪ ಗೌಡ ಮಾಡತ್ತಾರು – ನಿವೃತ್ತ ಕಾರ್ಯನಿರ್ವಹಣಾಧಿಕಾರಿವಿಟ್ಲ ಗ್ರಾಮೀಣ ಬ್ಯಾಂಕ್, ಶ್ರೀಮತಿ ಸುಜಾತ ದರ್ಬೆ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಅಲಂಗಾರು, ಯತೀಶ್ ಹೊಸಗದ್ದೆ ವಾಸ್ತುಶಿಲ್ಪಿ, ಶ್ರೀಮತಿ ಶಿಲ್ಪಾ ಮಾಡತ್ತಾರು ಮಹಿಳಾ ಘಟಕ ಅಧ್ಯಕ್ಷರುಶಿಬರಿ-ಮಾಡ ಶ್ರೀ ಮಲರಾಯಿ ಮೂವರ್ ದೈವಗಳ ಸೇವಾ ಮಂಡಳಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!