Monday, October 26, 2026
spot_imgspot_img
spot_imgspot_img

ಮಡಿಕೇರಿ: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಯುವತಿ; ಅಪರೇಷನ್ ಬಳಿಕ ನಿಜಾಂಶ ಬಯಲು

- Advertisement -
- Advertisement -

ಮಡಿಕೇರಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಯುವತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಗಡ್ಡೆ ಇರುವುದು ಬೆಳಕಿಗೆ ಬಂದಿದ್ದು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗಿದ್ದಾರೆ. ನಾಪೋಕ್ಲು ಗ್ರಾಮದ 20 ವರ್ಷದ ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಗಡ್ಡೆ ಇರುವುದು ಸ್ಕ್ಯಾನಿಂಗ್‌ನಿಂದ ಪತ್ತೆಯಾಗಿತ್ತು. ಮೂರು ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಈ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದರು. ಯುವತಿ ಆರೋಗ್ಯದಿಂದ ಇದ್ದು ಡಿಸ್‌ಚಾರ್ಜ್ ಮಾಡಲಾಗಿದೆ.

ಕೂದಲು ತಿನ್ನುವ ಅಭ್ಯಾಸ ಜೀವಕ್ಕೆ ಕುತ್ತು..!
ಈ ಯುವತಿ ಕೆಲ ವರ್ಷಗಳಿಂದ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಮನೆಯವರಿಗೆ ತಿಳಿಯದಂತೆ ಕೂದಲು ತಿನ್ನುತ್ತಿದ್ದಳು. ಇದರಿಂದಾಗಿ ಜೀರ್ಣವಾಗದ ಕೂದಲು ಹೊಟ್ಟೆಯಲ್ಲಿ ಸಂಗ್ರಹವಾಗಿ ಒಟ್ಟಿಗೇ ಸೇರಿಕೊಂಡಿದೆ. ಯುವತಿ ಯಾವಾಗಲೂ ಹೊಟ್ಟೆ ನೋವು ಎನ್ನುತ್ತಿದ್ದಳು ಎಂದು ಪಾಲಕರು ಮಾಹಿತಿ ನೀಡಿದರು. ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದಳಂತೆ, ಆಕೆಯನ್ನು ಪರೀಕ್ಷಿಸಿದಾಗ ರಕ್ತದ ಪ್ರಮಾಣವೂ ಕಡಿಮೆಯಾಗಿತ್ತು. ಕೂದಲು ಇರುವುದು ತಿಳಿದ ಹಿನ್ನೆಲೆಯಲ್ಲಿ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!