




ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯ ಇಲ್ಲಿ ನಡೆಯುವ ವರ್ಷಾವಧಿ ಜಾತ್ರೆಯು ಏಪ್ರಿಲ್ 09 ಗುರುವಾರದಿಂದ ಏಪ್ರಿಲ್ 23 ರ ಗುರುವಾರದ ವರೆಗೆ ನಡೆಯಲಿದೆ.
ಏಪ್ರಿಲ್ 1 ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಗೊನೆ ಮುಹೂರ್ತದಿಂದ ಆರಂಭವಾಗಿ ಏ.09 ಗುರುವಾರ ಧ್ವಜಾರೋಹಣಗೊಂಡು ಏ.23 ಗುರುವಾರದವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ.
ಏ.09 ಗುರುವಾರದಂದು ಮಧ್ಯಾಹ್ನದ ಮಹಾಪೂಜೆಯ ನಂತರ ಧ್ವಜಾರೋಹಣ ರಾತ್ರಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.ಏ. 10 ರಿಂದ 13 ರವರೆಗೆ ನಿತ್ಯಬಲಿ, ಮಹಾಪೂಜೆ
ಏ.14 ಮಂಗಳವಾರ ಸಂಕ್ರಮಣದಂದು ಮಧ್ಯಾಹ್ನ ಮಹಾಪೂಜೆ ಬಳಿಕ ರಾತ್ರಿ ಉತ್ಸವಏ.15 ಬುಧವಾರ ಬೆಳಗ್ಗೆ 7:00 ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6:00 ರಿಂದ ಉತ್ಸವ
ಏ.16 ಗುರುವಾರ ಬೆಳಗ್ಗೆ 7:00 ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6:00 ರಿಂದ ಉತ್ಸವ
ಏ.17 ಶುಕ್ರವಾರ ಬೆಳಗ್ಗೆ 8:00 ರಿಂದ ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6:00ರಿಂದ ಉತ್ಸವ, ಬೀದಿ ಸವಾರಿ, ಕಟ್ಟೆಪೂಜೆ
ಏ.18 ಶನಿವಾರ ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6:00 ರಿಂದ ಉತ್ಸವ ಕಟ್ಟೆಪೂಜೆ
ಏ.19 ಆದಿತ್ಯವಾರ ಮಧ್ಯಾಹ್ನ ಮಹಾಪೂಜೆ, ರಾತ್ರಿ ಚಂದ್ರಮಂಡಲ ಉತ್ಸವ, ಅನ್ನಸಂತರ್ಪಣೆ
ಏ. 20 ಸೋಮವಾರ ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ, ರಾತ್ರಿ ಗಂಟೆ 8 ರಿಂದ ಮಹಾರಥೋತ್ಸವ ಸುಡುಮದ್ದು ಪ್ರದರ್ಶನ, ಮಹಾ ಅನ್ನಸಂತರ್ಪಣೆ, ಬಳಿಕ ಮಹಾಪೂಜೆ, ಕವಾಟ ಬಂಧನ
ಏ.21 ಮಂಗಳವಾರ ಬೆಳಗ್ಗೆ 7:35ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆಗಳು, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6:00 ರಿಂದ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ, ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ.
22 ಬುಧವಾರದಂದು ರಾತ್ರಿ ಮಹಾಪೂಜೆಯ ಬಳಿಕ ಶ್ರೀ ನಾರಾಳ್ತಾಯ ಮತ್ತು ಇತರ ದೈವಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಏ.23 ಗುರುವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಪೂಜೆ, ಬಳಿಕ ರಾತ್ರಿ 8:00ಕ್ಕೆ ಮಂಗಳಮಂತ್ರಾಕ್ಷತೆ








