- Advertisement -
- Advertisement -





ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯದಲ್ಲಿ ನಡೆಯುವ ವರ್ಷಾವಧಿ ಜಾತ್ರೆಯು ಏಪ್ರಿಲ್ 09 ಗುರುವಾರದಿಂದ ಏಪ್ರಿಲ್ 23 ರ ಗುರುವಾರದ ವರೆಗೆ ನಡೆಯಲಿದೆ.
ಏಪ್ರಿಲ್ 1 ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಗೊನೆ ಮುಹೂರ್ತದಿಂದ ಆರಂಭವಾಗಿ, ಏ.09 ಗುರುವಾರ ಧ್ವಜಾರೋಹಣಗೊಂಡು ಏ.23 ಗುರುವಾರದವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಆರ್. ಶೆಟ್ಟಿ ನಡ್ಯೇಲು ನುಳಿಯಾಲು ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -








