Sunday, June 14, 2026
spot_imgspot_img
spot_imgspot_img

ಮಣಿಪಾಲ : ದ್ವಿಚಕ್ರ ವಾಹನದಲ್ಲಿ ತೆರಳುವಾಗ ಹೃದಯಸ್ತಂಭನದಿಂದ ವ್ಯಕ್ತಿ ಮೃತ್ಯು

- Advertisement -
- Advertisement -

ಮಣಿಪಾಲ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹೃದಯ ಸ್ತಂಭನಗೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಲೆವೂರು ಗ್ರಾಮದ ಮಂಚಿಕೆರೆಯಲ್ಲಿ ನಡೆದಿದೆ.

ರಾಘವೇಂದ್ರ (49) ಮೃತ ವ್ಯಕ್ತಿ.

ಅಲೆವೂರು ಗ್ರಾಮದ ಮಂಚಿಕೆರೆಯ ಮಣಿಪಾಲ-ಅಲೆವೂರು ರಸ್ತೆಯಲ್ಲಿ ಕೆ. ಅಶ್ವಥ್ ಅವರೊಂದಿಗೆ ಪುರೋಹಿತ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ ಹೃದಯ ಸ್ತಂಭನಗೊಂಡು ವಾಹನ ಸಹಿತ ರಸ್ತೆಗೆ ಬಿದ್ದುಅಸ್ವಸ್ಥಗೊಂಡಿದ್ದರು ಎಂದು ತಿಳಿದು ಬಂದಿದೆ.

ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!