Saturday, June 20, 2026
spot_imgspot_img
spot_imgspot_img

ಬೈಕ್ ರಿಪೇರಿ ಮಾಡಿಸಿ ಹಣ ಕೊಡದೆ ಸತಾಯಿಸಿದಕ್ಕೆ ವ್ಯಕ್ತಿಯ ಕೊಲೆ; ನಾಲ್ವರು ಅರೆಸ್ಟ್..!

- Advertisement -
- Advertisement -

ಬೈಕ್ ರಿಪೇರಿ ಮಾಡಿಸಿಕೊಂಡು ಹಣ ಕೊಡದೆ ಸತಾಯಿಸಿದ್ದಲ್ಲದೇ ಧಮ್ಕಿ ಹಾಕಿದ್ದಕ್ಕೆ ಸಿಟ್ಟಿಗೆದ್ದ ನಾಲ್ವರು ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚನ್ನಬೈರನಹಳ್ಳಿ ಗ್ರಾಮದ ಸತ್ಯನಾರಾಯಣ (45) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಕಲ್ಲೋಡಿ ಎಂಬಲ್ಲಿ ಚೇತನ್ ಗ್ಯಾರೇಜ್ ನಡೆಸುತ್ತಿದ್ದ. ಸತ್ಯನಾರಾಯಣ ತನ್ನ ಬೈಕ್ ರಿಪೇರಿ ಮಾಡಿಸಿದ್ದ. ಆದರೆ ಹಣ ಕೊಡದೇ ಸತಾಯಿಸುತ್ತಲೇ ಇದ್ದ. ಒಮ್ಮೆ ಚೇತನ್‌ ಹಣ ಕೇಳಿದ್ದಕ್ಕೆ ಸತ್ಯನಾರಾಯಣ ಧಮ್ಕಿ ಹಾಕಿದ್ದ ಎನ್ನಲಾಗಿದೆ.

ಧಮ್ಕಿ ಹಾಕಿದ್ದಕ್ಕೆ ಚೇತನ್‌ ಕೋಪಗೊಂಡಿದ್ದ. ಚೇತನ್‌ ತನ್ನ ಸ್ನೇಹಿತ ಜ್ವಾಲೇಂದ್ರ ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿ ಸತ್ಯನಾರಾಯಣನಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಸತ್ಯ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Related news

error: Content is protected !!