Monday, June 29, 2026
spot_imgspot_img
spot_imgspot_img

ಮಣಪ್ಪುರಂ ಗೋಲ್ಡ್​ ಲೋನ್​ ಫೈನಾನ್ಸ್ ಕಚೇರಿಗೆ ನುಗ್ಗಿದ 6 ಮಂದಿ ದರೋಡೆಕೋರರು; ಇಬ್ಬರನ್ನು ಎನ್ ಕೌಂಟರ್ ಮಾಡಿದ ಪೊಲೀಸರು!

- Advertisement -
- Advertisement -

ಆಗ್ರಾ: ಮಣಪ್ಪುರಂ ಗೋಲ್ಡ್​ ಲೋನ್​ ಫೈನಾನ್ಸ್ ಕಚೇರಿಗೆ ಬಂದೂಕು ಹಿಡಿದು ನುಗ್ಗಿದ 6 ಮಂದಿ ದರೋಡೆಕೋರರು ಚಿನ್ನ ಹಾಗೂ ಲಕ್ಷಾಂತರ ರೂ. ಹಣ ದೋಚಿದ ಘಟನೆ ಉತ್ತರ ಪ್ರದೇಶದ ಕಮಲಾ ನಗರದಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಮಂದಿ ಪೈಕಿ ಇಬ್ಬರು ದರೋಡೆಕೋರರಾದ ಮನೀಷ್​ ಪಾಂಡೆ ಮತ್ತು ನಿದೋರ್ಷ್​ ಕುಮಾರ್ ಅನ್ನು ಎನ್​ಕೌಂಟರ್​ ಮಾಡಿದ್ದಾರೆ.

ಮಣಪ್ಪುರಂ ಕಚೇರಿಗೆ ಬಂದೂಕು ಹಿಡಿದು ಮುಸುಕುಧಾರಿಗಳಾಗಿ ನುಗ್ಗಿದ ದರೋಡೆಕೋರರ ತಂಡ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಸುಮಾರು 15 ಕೆಜಿ ಚಿನ್ನ, 5 ಲಕ್ಷ ರೂಪಾಯಿ ನಗದು ಲೂಟಿ ಮಾಡಿ ಪರಾರಿಯಾಗಿತ್ತು. ಆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಚೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದರು. ದರೋಡೆಕೋರರು ಸಮೀಪದ ಮೆಡಿಕಲ್​ ಶಾಪ್​ವೊಂದರಲ್ಲಿ ಇರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದರು. ಆ ವೇಳೆ ದರೋಡೆಕೋರರ ತಂಡ ಪೊಲೀಸರತ್ತ ಗುಂಡಿನ ದಾಳಿ ಮಾಡಿದ್ದು, ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಆರೋಪಿಗಳಿಬ್ಬರು ಎನ್​ಕೌಂಟರ್​ಗೆ ಬಲಿಯಾಗಿದ್ದು ಈ ವೇಳೆ ಅವರಿಂದ 7.5 ಕೆಜಿ ಚಿನ್ನ, ಒಂದೂವರೆ ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!