Thursday, August 6, 2026
spot_imgspot_img
spot_imgspot_img

ಮಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮುತ್ತಿಗೆ ಹಾಕಲು ಸಾರ್ವಜನಿಕರಿಂದ ತಯಾರಿ**ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಮ್ಮೆ ಸರಕಾರ ಮುಜುಗರಕ್ಕೆ ಈಡಾಗುವುದಂತು ಖಂಡಿತ

- Advertisement -
- Advertisement -

ಮಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರು ವೆಲೆನ್ಸಿಯಾದ ‘ಫ್ರೆಡೋಸ್ ಎನ್‌ಪ್ಲೇವ್’ ವಸತಿ ಸಮುಚ್ಚಯದಲ್ಲಿ ಹೊಂದಿರುವ ಮನೆ ಹಾಗೂ ನಗರದ ಮಲ್ಲಿಕಟ್ಟೆಯ ಜುಗುಲ್ ಟವರ್ಸ್ ಕಟ್ಟಡದಲ್ಲಿರುವ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ಕಳೆದ ಒಂದು ತಿಂಗಳ ಹಿಂದೆ ದಾಳಿ ನಡೆಸಿದ್ದರು.ದಾಳಿ ವೇಳೆ ಸರಿಸುಮಾರು 12 ಕೋಟಿಯಷ್ಟು ಹಣ ಕೆಜಿಗಟ್ಟಲೆ ಚಿನ್ನ ಕಾಫಿ ಎಸ್ಟೇಟ್ ಇದೆಲ್ಲಾ ಸಿಕ್ಕಿರುತ್ತದೆ. ಆದರೆ ಲೋಕಾಯುಕ್ತರು ದಾಳಿ ನಡೆಸಿ ಒಂದು ತಿಂಗಳು ಕಳೆದರೂ ಇನ್ನೂ ಇದೇ ಕಛೇರಿಯಲ್ಲಿ ಕರ್ತವ್ಯದಲ್ಲಿರುವುದು ಸಾರ್ವಜನಿಕರಲ್ಲಿ ಅಸಮಧಾನ ಮೂಡಿಸಿದೆ.ಮಂಗಳೂರಿಗೆ ಬಂದು ಕೇವಲ 3 ತಿಂಗಳ ಒಳಗೆ ಎಲ್ಲಾ ಕಲ್ಲಿನ ಕ್ರಶರ್‌ನವರನ್ನು ಪರ್ಮಿಟ್ ಬ್ಲಾಕ್ ಮಾಡಿ ಲಂಚದ ಬೇಡಿಕೆ ಇಟ್ಟು ಹಣ ವಸೂಲಿ ಮಾಡುತ್ತಿದ್ದರು. ಎಲ್ಲಾದರೂ ಲಂಚ ಕೊಡದಿದ್ದರೆ ಕಲ್ಲಿನ ಕೋರೆಯವರ ಲೈಸೆನ್ಸ್ ಅನ್ನು ರದ್ದು ಮಾಡುವುದೆಂದು ಬೆದರಿಕೆ ಒಡ್ಡಿ ಮತ್ತು ಪರ್ಮಿಟ್ ಅನ್ನು ಬ್ಲಾಕ್ ಮಾಡುತ್ತೇನೆಂದು ಹಣವನ್ನು ವಸೂಲಿ ಮಾಡುತ್ತಿದ್ದರು. ಇಂಥಹ ಲಂಚ ಕೋರ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿಯಾದರೂ ಮತ್ತು ಅಕ್ರಮ ಆಸ್ತಿ ಸಿಕ್ಕಿದ್ದಾದರೂ ಯಾವುದನ್ನು ಲೆಕ್ಕಿಸದೇ ರಾಜಕೀಯ ವ್ಯಕ್ತಿಗಳ ಸಹಕಾರದಿಂದ ತಮ್ಮ ಮೇಲೆ ಆರೋಪ ಇದ್ದರೂ ಹಣ ಮತ್ತು ಆಸ್ತಿಯನ್ನು ಜಪ್ತಿ ಮಾಡಿದರು ಈಗಲೂ ಆಫೀಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಲಂಚವನ್ನು ಪಡೆಯುತ್ತಿದ್ದಾರೆ.ಈ ಬಗ್ಗೆ ಅವರನ್ನು ಯಾರೂ ಪ್ರಶ್ನಿಸಿದರೂ ಎಲ್ಲರಲ್ಲಿ ಹೇಳುವುದು ಒಂದೇ ’ನಾನು ಇಲ್ಲಿಗೆ ಡೆಪ್ತ್ ಡೈರಕ್ಟಾಗಿ ಬರಬೇಕಾದರೆ ಹಣ ಕೊಟ್ಟೆ ಬಂದದ್ದು ನಾನು ಯಾರಿಗೂ ಬಗ್ಗಲ್ಲ ಮತ್ತು ಯಾರಿಗೂ ಹೆದರಲ್ಲ ನನಗೂ ರಾಜಕೀಯ ಹಿನ್ನಡೆ ಉಂಟು ಎಂದು ಹೇಳಿ ಲಂಚವನ್ನು ಪಡೆಯುತ್ತಿದ್ದಾರೆ ಇಂಥ ಅಧಿಕಾರಿಯನ್ನು ಯಾಕೆ ಸಸ್ಪೆಂಡ್ ಮಾಡ್ಲಿಲ್ಲ ಇವರ ಮೇಲೆ ಪ್ರಕರಣ ದಾಖಲಾಗಿಲ್ಲ. ಲೋಕಾಯುಕ್ತ ಮತ್ತು ಸರಕಾರ ಇವರ ರಾಜಕೀಯ ಇಂಪ್ಲೆನ್ಸಿಗೆ ಬಗ್ಗಿ ಹೋಯಿತೆ ಇಂತಹ ಅಧಿಕಾರಿಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಿ ಇಲ್ಲವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಜನಗಳೇ ದಕ್ಷಿಣ ಕನ್ನಡ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಮುತ್ತಿಗೆಯಾಗಿ ಪ್ರತಿಭಟನೆ ಮಾಡಬೇಕಾದಿತು ಆದಷ್ಟು ಬೇಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಸಚಿವರು ಮತ್ತು ಮುಖ್ಯಮಂತ್ರಿಗಳು ಕೆಲಸದಿಂದ ವಜಾ ಮಾಡುವಂತೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!