- Advertisement -
- Advertisement -
ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಧೂದ್‌ಸಾಗರ್ ಬಳಿ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಳಿಗಳ ಮೇಲೆ ಮಣ್ಣು ಜರಿದ ಕಾರಣ ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಎಂದು ಮೂಲಗಳು ಹೇಳಿವೆ.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ ಮಂಗಳೂರು-ಮುಂಬೈ ರೈಲಿನ ಮಾರ್ಗ ಬದಲಾವಣೆ ಮಾಡಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೂಧ್ಸಾಗರ್-ಸೋನಾಲೆಂ ನಿಲ್ದಾಣಗಳ ನಡುವೆ ಸಂಚರಿಸುವಾಗ ಭೂಕುಸಿತದಿಂದಾಗಿ ರೈಲಿನ ಎಂಜಿನ್, ಒಂದು ಬೋಗಿ ಹಳಿತಪ್ಪಿತು.

ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ರೈಲ್ವೆ ಇಲಾಖೆ, ಪ್ರಯಾಣಿಕರನ್ನು ರಕ್ಷಿಸಿ ಮರಳಿ ಅದೇ ರೈಲಿನಲ್ಲಿ ಗೋವಾದ ಮಡಗಾಂವ್‌ಗೆ ವಾಪಸ್ ಕಳುಹಿಸಿಕೊಟ್ಟರು.


- Advertisement -








