Tuesday, May 7, 2024
spot_imgspot_img
spot_imgspot_img

ಮಂಗಳೂರು: ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತನ ಹತ್ಯೆ ವಿರೋಧಿಸಿ ಪ್ರತಿಭಟನೆ!

- Advertisement -G L Acharya panikkar
- Advertisement -

ಕಾವೂರು: ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ಅಭೂತಪೂರ್ವ ಸ್ಥಾನಗಳಿಸಿ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಹತ್ಯೆಗೈದು ಆಸ್ತಿ ಪಾಸ್ತಿ ಹಾನಿ ಮಾಡಿರುವುದನ್ನು ವಿರೋಧಿಸಿ ಮಂಗಳೂರು ಉತ್ತರ ಮಂಡಲ ಬಿಜೆಪಿ ವತಿಯಿಂದ ಕಾವೂರು ಬಿಜೆಪಿ ಕಚೇರಿ ಮುಂಭಾಗ ಬುಧವಾರ ಕೋವಿಡ್ ನಿಯಮ ಪಾಲಿಸಿ ಮೌನ ಪ್ರತಿಭಟನೆ ನಡೆಯಿತು.

ಶಾಸಕ ಡಾ.ಭರತ್ ಶೆಟ್ಟಿ ಸಹಿತ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕರಾಳ ಕ್ರೌರ್ಯದ ಬಗ್ಗೆ ಪ್ರತಿಭಟಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಪ.ಬಂಗಾಳದಲ್ಲಿ ಬಿಜೆಪಿ 2ನೇ ಸ್ಥಾದಲ್ಲಿದ್ದು, 70 ಸ್ಥಾನ ಗಳಿಸಿದೆ. 90 ಕಡೆಗಳಲ್ಲಿ 1000ಸಾವಿರ ಅಂತರದ ವೀರೋಚಿತ ಸೋಲು ಕಂಡಿದೆ,ಇದನ್ನು ಸಹಿಸದೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ  ಟಿಎಂಸಿ ಗೂಂಡಾಗಳು ಕ್ರೌರ್ಯ ಮೆರೆದಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಹಿಂದೂಗಳ ಮೇಲೆ ದ್ವೇಷದ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಪೈಪೋಟಿ ಸಹಜ.ಬಳಿಕ ಯಾವುದೇ ದ್ವೇಷ ,ವೈಯುಕ್ತಿಕ ಹೋರಾಟ ,ಹೊಡೆದಾಟದಲ್ಲಿ ಬಿಜೆಪಿ ನಂಬಿಕೆ ಇರಿಸಿಲ್ಲ. ಇದೀಗ ಟಿಎಂಸಿ ಕಾರ್ಯಕರ್ತರ ಹಿಂಸಾತ್ಮಕ ಪ್ರಚೋದನೆಯಿಂದ ಪಶ್ಚಿಮ ಬಂಗಾಳದ ಹೊರಗೂ ಟಿಎಂಸಿ ಶಾಸಕರು,ಸಂಸದರಿಗೆ ಭದ್ರತೆಯ ಕೊರತೆ ಎದುರಾಗಬಹುದು .ದೇಶಕ್ಕೆ ಹಿಂಸೆಯ ಸಂದೇಶ ನೀಡಿ ಪ್ರಚೋದಿಸಿದ ಆ ಪಕ್ಷದ ವಿರುದ್ದ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಈ ಪ್ರತಿಭಟನೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಉಪ ಮಹಾಪೌರರಾದ ಸುಮಂಗಲ ರಾವ್, ಮಂಡಲದ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು ಭಾಗವಹಿಸಿದ್ದರು.

- Advertisement -

Related news

error: Content is protected !!