Tuesday, April 23, 2024
spot_imgspot_img
spot_imgspot_img

ಮಂಗಳೂರು: ಲೋನ್ ಆ್ಯಪ್’ಗಳ ದರ್ಬಾರ್.! ಯುವತಿಯರಿಗೆ ಕಿರುಕುಳ..? ಮರುಪಾವತಿ ಮಾಡಿದವರಿಗೂ ತಪ್ಪಿದಲ್ಲ ಹಿಂಸೆ.!

- Advertisement -G L Acharya panikkar
- Advertisement -

ಮಂಗಳೂರು: ನಗರದ ಜನರಿಗೆ ಸುಲಭದಲ್ಲಿ ಸಾಲ ನೀಡುತ್ತೇವೆಂದು ಹೇಳಿ ಈಗಾಗಲೇ ಕೆಲವು ಯುವಕರ ಬದುಕನ್ನೇ ಕಸಿದುಕೊಂಡಿರುವ ಲೋನ್ ಆ್ಯಪ್’ಗಳ ಸುಳಿಯಲ್ಲಿ ಕರಾವಳಿ ಭಾಗದ ಕೆಲವು ಯುವತಿಯರು ಕೂಡ ಸಿಲುಕಿರುವ ಘಟನೆ ನಡೆದಿದೆ.

ಹಣದ ತುರ್ತು ಅಗತ್ಯಕ್ಕಾಗಿ ಆ್ಯಪ್ ಮೂಲಕ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗದವರು ಮಾತ್ರವಲ್ಲದೆ, ಮರುಪಾವತಿ ಮಾಡಿದವರು ಕೂಡ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು ನಗರದ ಯುವತಿಯೋರ್ವಳು ಕುಟುಂಬದ ತುರ್ತು ಅಗತ್ಯಕ್ಕಾಗಿ ಲೋನ್ ಆ್ಯಪ್ ಮೂಲಕ 8,000 ರೂ. ಪಡೆದುಕೊಂಡಿದ್ದು ಬಳಿಕ ಮರುಪಾವತಿ ಮಾಡಿದ್ದರು. ಆದರೂ ಕೆಲವು ದಿನಗಳ ಅನಂತರ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಲಾಗಿದೆ. ಬಳಿಕ ಆಕೆಯ ಫೋಟೋವನ್ನು ಪಡೆದು ಅಶ್ಲೀಲವಾಗಿ ಎಡಿಟ್ ಮಾಡಿ ಆಕೆಯ ಗೆಳೆಯರು, ಸಂಬoಧಿಕರು, ಪಕ್ಕದ ಮನೆಯವರಿಗೆ ಕಳುಹಿಸಲಾಗಿದೆ. ಇದನ್ನು ತಿಳಿದ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ ಎನ್ನಲಾಗಿದೆ.

Super-fast Instant Personal Loan App Up to 8,000 Without Salary slip ||  Without Income Loan All in India

ಆಕೆಗೆ ಬರುತ್ತಿದ್ದ ವಾಟ್ಸ್’ಆಪ್ ಕರೆಗೆ ವಾಪಸ್ ಕರೆ ಮಾಡಿದರೆ ಅದು ಯಾವುದೋ ಓರ್ವಳು ಮಹಿಳೆಗೆ ಸಂಪರ್ಕ ಆಗುತ್ತಿದೆ. ಆಕೆ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾಳೆ. ಕಿರುಕುಳಕ್ಕೊಳಗಾದ ಯುವತಿ ಸದ್ಯ ಸಿಮ್ ಬದಲಾಯಿಸಿದ್ದಾಳೆ. ಆದರೆ ಈಗ ಆಕೆಯ ಸಹೋದರಿಗೆ ನಿರಂತರ ಕರೆ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದೇ ರೀತಿ ಮತ್ತೋರ್ವಳು ಯುವತಿಗೂ ಕಿರುಕುಳ ನೀಡಿದ ಘಟನೆಯೂ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಮಂಗಳೂರು: ಲೋನ್ ಆಪ್ ಮೂಲಕ ಸಾಲ ಪಡೆಯಬಾರದು: ಡಿಸಿಪಿ

ಮoಗಳೂರಿನಲ್ಲಿ ಇಂತಹ ಪ್ರಕರಣಗಳು ಕೆಲವು ನಡೆದಿದೆ. ಆದರೆ ಕೆಲವು ಯುವತಿಯರು ತಮ್ಮ ಮಾನ ಹಾನಿಯಾಗುವ ಕಾರಣದಿಂದ ರಹಸ್ಯವಾಗಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ಸುರತ್ಕಲ್’ನ ಓರ್ವ ಯುವಕ ಲೋನ್ ಆ್ಯಪ್ ಸುಳಿಗೆ ಬಿದ್ದು ಅನಾಹುತ ಮಾಡಿಕೊಂಡಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಇದೀಗ ಮತ್ತೆ ಮೂವರು ಯುವಕರು ತೊಂದರೆಗೆ ಸಿಲುಕಿರುವುದಾಗಿ ತಿಳಿದುಬಂದಿದೆ. ಅವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.

World Wide Hack on Steam

ಈ ಲೋನ್ ಆ್ಯಪ್ ಚೀನಾದ ಲಿಂಕ್ ಇರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆದಿರುವ ಲೋನ್ ಆ್ಯಪ್ ಪ್ರಕರಣಗಳ ಮಾಹಿತಿಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪಡೆದುಕೊಂಡಿವೆ. ಇದರಲ್ಲಿ ಕಳೆದ ಜನವರಿಯಲ್ಲಿ ಸುರತ್ಕಲ್‌ನಲ್ಲಿ ಇದೇ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣದ ವರದಿಯೂ ಸೇರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!