Wednesday, July 22, 2026
spot_imgspot_img
spot_imgspot_img

ಮಂಗಳೂರು: (ನ.10) ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

- Advertisement -
- Advertisement -

ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪಡೀಲ್‌ ಮಂಗಳೂರು ಮತ್ತು, ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನ, ಎ ಫ್ರೆಂಡ್ಸ್‌ ಮಂಗಳೂರು, ಶಿವ ಫ್ರೆಂಡ್ಸ್‌ ಕ್ಲಬ್‌, SYS ಇಸಾಬ ದ ಕ, ಹಿದಾಯ ಫೌಂಡೇಶನ್‌ ಮಂಗಳೂರು, ಕನ್ನಡ ಕಟ್ಟೆ ಮಂಗಳೂರು, SKSSF ವಿಕಾಯ, ರೆಸ್ಕ್ಯೂ ಚಾರಿಟೇಬಲ್‌ ಟ್ರಸ್ಟ್‌, ಮಸೂದ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಮಂಗಳೂರು ಇವರ ಸಹಯೋಗದೊಂದಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಮ್ಮ ನಗರ ಸ್ವಚ್ಛ ನಗರ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನ. 10 ನೇ ಆದಿತ್ಯವಾರ ಮಂಗಳೂರಿನ ಪಡೀಲ್‌ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್ ಶ್ರೀಮತಿ ಚಂದ್ರಾವತಿ , ಕಾರ್ಪೊರೇಟರ್ ಶ್ರೀಮತಿ ರೂಪಶ್ರೀ, ಡಾ. ಎಂ ಅಣ್ಣಯ್ಯ ಕುಲಾಲ್, ಹನೀಫ್ ಹಾಜಿ ಗೋಳ್ತ ಮಜಲು, ಸುಜಾ ಮೋಹಮ್ಮದ್, ಅಬ್ದುಲ್ ಜಬ್ಬಾರ್ ಮಾರಿಪ್ಪಳ್ಳ, ಸಂತೋಷ್ ಶೆಟ್ಟಿ, ಸುರೇಶ್ ಆಚಾರ್, ದೇವದಾಸ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಯುವರಾಜ್ ಕಣ್ಣೂರು, ಮೊಹಮ್ಮದ್ ಶಾಕಿರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರುಗಳಾದ ಶಶಿಧರ್ ಶೆಟ್ಟಿ, ನಜೀರ್ ಬೆಂಗ್ರೆ, ಹಾಗೂ ಜಾರ್ಜ್ ಪಿವಿ ಇವರನ್ನು ಸನ್ಮಾನಿಸಲಾಗುವುದು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನಪ್ರಿಯ ಆಸ್ಪತ್ರೆಯು ನುರಿತ ವೈದ್ಯರೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಎಲ್ಲಾ ರೀತಿಯ ಪರೀಕ್ಷೆಗಳನ್ನು 50% ರಿಯಾಯಿತಿ ದರದಲ್ಲಿ ನೀಡಲಾಗುವುದು.

ಶಿಬಿರದಲ್ಲಿ ಫಿಸಿಷಿಯನ್ (ಮಧುಮೇಹ ಮತ್ತು ರಕ್ತದ ಒತ್ತಡ ಇತ್ಯಾದಿ), ಶಸ್ತ್ರ ಚಿಕಿತ್ಸಾ ತಜ್ಞರು, ಕಿಡ್ನಿ ಮತ್ತು ಮೂತ್ರಕೋಶ ತಜ್ಞರು, ಕೀಲು, ಮೂಳೆ ಮತ್ತು ಬೆನ್ನು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸಾ ತಜ್ಞರು ಲಭ್ಯವಿದ್ದು, ಶಿಬಿರಾರ್ಥಿಗಳು ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಹಾಗೂ ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್, ಕ್ಷ-ಕಿರಣ, ಅಲ್ಟ್ರಾಸೌಂಡ್, ಇ.ಸಿ.ಜಿ ಮುಂತಾದ ಪರೀಕ್ಷೆಗಳನ್ನು 50% ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜನಪ್ರಿಯ ಫೌಂಡೇಶನ್‌ನ ಅಧ್ಯಕ್ಷರು ಡಾ. ಅಬ್ದುಲ್‌ ಬಶೀರ್‌ ವಿ.ಕೆ ಹಾಗೂ ಸಿ.ಇ.ಒ ಡಾ.ಕಿರಾಶ್‌ ಪರ್ತಿಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!