Monday, October 12, 2026
spot_imgspot_img
spot_imgspot_img

ಗೃಹಜ್ಯೋತಿ ದಾಖಲೆ ಪರಿಶೀಲನಾ ಪ್ರಕ್ರಿಯೆಗೆ ಅ. 31ರವರೆಗೆ ಗಡುವು ವಿಸ್ತರಣೆ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಮತ್ತೊಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರವು ಮತ್ತೆ ಒಂದು ತಿಂಗಳ ಕಾಲಾವಕಾಶವನ್ನು ವಿಸ್ತರಿಸಿ, ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2026 ರವರೆಗೆ ನಿಗದಿಪಡಿಸಿದೆ.

ಅಕ್ಟೋಬರ್ 31ರೊಳಗೆ ಪರಿಶೀಲನೆ ಹಾಗೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಯೋಜನೆಯ ಪ್ರಯೋಜನ ಅರ್ಹ ಕುಟುಂಬಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಆ ಮೂಲಕ ಗೃಹಜ್ಯೋತಿ ಸೌಲಭ್ಯ ಪಡೆಯಲು ಮತ್ತೊಂದು ಅವಕಾಶ ನೀಡಲಾಗಿದ್ದು, ಡಾಕ್ಯುಮೆಂಟ್‌ ವೆರಿಫಿಕೇಶನ್‌ಗೆ ಅಕ್ಟೋಬರ್ ಕೊನೆಯವರೆಗೆ ಕಾಲಾವಕಾಶ ಕೊಡಲಾಗಿದೆ. ಈ ಹಿಂದೆ ಮನೆ ಮನೆ ಸಮೀಕ್ಷೆಯ ಅಂತಿಮ ಗಡುವು ಸೆಪ್ಟೆಂಬರ್ 30ಕ್ಕೆ ನಿಗದಿ ಮಾಡಲಾಗಿತ್ತು, ಆದರೆ ಇನ್ನೂ ಕೆಲ ಕಡೆಗಳಲ್ಲಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಬಾಕಿ ಇದ್ದು, ಹೀಗಾಗಿ ಗೃಹಜ್ಯೋತಿ ಮರುಪರಿಶೀಲನೆ ಸಮೀಕ್ಷೆ ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!