Monday, October 12, 2026
spot_imgspot_img
spot_imgspot_img

ನಂದಿನಿ ಮಿಲ್ಕ್ ಪೌಡರ್ ಸೇಫ್‌ : ಆಹಾರ ಸುರಕ್ಷತಾ ಇಲಾಖೆ ವರದಿ

- Advertisement -
- Advertisement -

ಬೆಂಗಳೂರು: ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆಗಿದೆ ಎಂಬ ಆರೋಪದ ಬಳಿಕ ಇದೀಗ ಲ್ಯಾಬ್ ವರದಿ ಹೊರಬಂದಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತ ಎಂದು ತಿಳಿದುಬಂದಿದೆ.

ಈ ಹಿಂದೆ ನಂದಿನಿ ಮಿಲ್ಕ್ ಪೌಡರ್‌ನಲ್ಲಿ ಕಲಬೆರಕೆ ಆಗ್ತಿದೆ ಅನ್ನೋ ಗಂಭೀರ ಆರೋಪ ಇತ್ತು. ಇದರ ಬೆನ್ನಲ್ಲೇ ಮಿಲ್ಕ್ ಪೌಡರ್ ಗುಣಮಟ್ಟ ಟೆಸ್ಟ್ ಮಾಡಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದರು. ಬಳಿಕ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಮಿಲ್ಕ್ ಪೌಡರ್ ಸ್ಯಾಂಪಲ್ ಸಂಗ್ರಹ ಮಾಡಿ ಎಫ್‌ಎಸ್‌ಎಸ್‌ಎಐ ಟೆಸ್ಟ್‌ಗೆ ಕಳಿಸಲಾಗಿತ್ತು.

ಇದೀಗ ಲ್ಯಾಬ್‌ ರಿಪೋರ್ಟ್‌ ಬಂದಿದ್ದು, ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅಧಿಕೃತ ವರದಿ ಬಂದಿದೆ.

- Advertisement -

Related news

error: Content is protected !!