Wednesday, April 24, 2024
spot_imgspot_img
spot_imgspot_img

ದಕ್ಷಿಣ ಕನ್ನಡ: ಗ್ರಾಪಂ ಚುನಾವಣೆಗೆ ಒಟ್ಟು 4,896 ನಾಮಪತ್ರಗಳು ಸಲ್ಲಿಕೆ!

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆಗೆ ಒಟ್ಟು 4,896 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಂಗಳೂರು, ಮೂಡಬಿದ್ರೆ, ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್​​​ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಮಂಗಳೂರು ತಾಲೂಕಿನ 37 ಗ್ರಾಮ ಪಂಚಾಯತ್​ನ 651 ಸದಸ್ಯ ಸ್ಥಾನಗಳಿಗೆ 1859 ನಾಮಪತ್ರ, ಮೂಡಬಿದ್ರೆಯ 12 ಗ್ರಾಪಂನ 193 ಸದಸ್ಯ ಸ್ಥಾನಗಳಿಗೆ 485 ನಾಮಪತ್ರ, ಬಂಟ್ವಾಳ ತಾಲೂಕಿನ 57 ಗ್ರಾಪಂಗಳ 837 ಸದಸ್ಯ ಸ್ಥಾನಗಳಿಗೆ 2,552 ನಾಮಪತ್ರ ಸಲ್ಲಿಕೆಯಾಗಿವೆ.

ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 106 ಗ್ರಾಮ ಪಂಚಾಯತ್​​​ನ 1,681 ಸದಸ್ಯ ಸ್ಥಾನಕ್ಕೆ 4,896 ನಾಮಪತ್ರ ಸಲ್ಲಿಕೆಯಾಗಿವೆ. ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಡಿ. 12ರವರೆಗೆ ಕಾಲಾವಕಾಶ ಇದೆ. ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ.

- Advertisement -

Related news

error: Content is protected !!