





ಮಾಣಿ: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಶೇಕಡಾ 100% ಫಲಿತಾಂಶ ಪಡೆದುಕೊಂಡಿದೆ. ಶಾಲಾ ವಿದ್ಯಾರ್ಥಿನಿ ಸ್ವಸ್ತಿ ಎಸ್.ಭಟ್ 618 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು ರಾಜ್ಯಕ್ಕೆ 8ನೇ ಸ್ಥಾನಿಯಾಗಿದ್ದಾಳೆ.
ವಿದ್ಯಾರ್ಥಿಗಳಾದ ವೈಷ್ಣವಿ 615, ನಿವ್ಯಾ ರೈ 608, ಮಹಮ್ಮದ್ ತಝೀಮ್ ಇಟ್ಬಾಲ್ 608, ಲೋಯಿನ್ ಪಾಯ್ಸ್ 607, ಸೌರಭ್ ಪ್ರಭು 606 ಹಾಗೂ ಆರೂನ್ ಪಾಯ್ಸ್ 600, ತನ್ವಿ ಎನ್. ಶೆಟ್ಟಿ 95% , ಶರಣ್ಯ ಪೈ ಎಮ್ 95%, ಸಿಂಚನಾ ಶ್ರೀ ಶೆಟ್ಟಿ 95%, ,ಅಬೂಬಕರ್ ನವವಿ 94%, ಸುಹಾನಿ ಎಸ್ ಶೆಟ್ಟಿ 94%, ಗ್ರೀಮಾ ಹೆಜೆಲ್ ವೇಗಾಸ್ 94%, ಚರಿಷ್ಮಾ 93%, ಶ್ರಾವ್ಯ ಜಿ 93%, ದಿಶಾ.ಎಮ್ 93%, ಆಯೇಷಾ ಅಶ್ಫಾನಾ 92%, ಹರ್ಷಿತ್ ಡಿ.ಕೆ 92%, ಜನನಿ 92%, ಮನಸ್ವಿ ಡಿ.ಕೆ 91%, ಹೃತ್ವಿಕ್ 91%, ತನ್ವಿತ್ ಸಿ.ಜಿ 90%, ಚಿನ್ಮಯಿ 90%, ಪುನೀತ್ 90% ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾದವರ ಪೈಕಿ 25 ವಿದ್ಯಾರ್ಥಿಗಳು 90ಶೇಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದು. 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕ ವೃಂದ ಅಭಿನಂದಿಸಿದೆ.








