Wednesday, July 22, 2026
spot_imgspot_img
spot_imgspot_img

ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈ‌ಎಸ್, ಎಸ್‌ಎಸ್‌ಎಫ್ ಸೂರಿಕುಮೇರು ಯುನಿಟ್ ವತಿಯಿಂದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

- Advertisement -
- Advertisement -

ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈ‌ಎಸ್, ಎಸ್‌ಎಸ್‌ಎಫ್ ಸೂರಿಕುಮೇರು ಯುನಿಟ್ ವತಿಯಿಂದ ಸಂಘಟನೆಯ ದ‌ಅ‌ವಾ ಕಾರ್ಯದರ್ಶಿ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಉಸ್ತಾದರ ಬೇಂಕೆ ನಿವಾಸದಲ್ಲಿ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಹು|ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರ್ ಮಾತನಾಡಿ ಕಪೋಕಲ್ಪತ ವಿಚಾರಗಳಿಗೆ ಮನ್ನಣೆಯನ್ನು ನೀಡಬೇಡಿ ಮೂಢನಂಬಿಕೆಯು ನುಸುಳದಂತೆ ಎಚ್ಚರಿಕೆ ವಹಿಸಿರಿ ಶುಭ ಅಶುಭ ದಿನಗಳನ್ನು ಉಲಮಾಗಳಲ್ಲಿ ಕೇಳಿ ಕಲಿಯಿರಿ ಎಂದು ಹೇಳಿದರು.

ಅಬ್ದುಲ್ ಹಮೀದ್ ಮುಸ್ಲಿಯಾರ್ ನಂದಾವರ, ಮಹ್‌ಮೂದ್ ಸ‌ಅದಿ ಬಾರೆಬೆಟ್ಟು, ನಿಝಾಂ ಸ‌ಅದಿ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ನಾಯಕರುಗಳಾದ ಯೂಸುಫ್ ಹಾಜಿ, ಕರೀಂ ನೆಲ್ಲಿ, ಮಹುಮ್ಮದ್ ಹನೀಫ್ ದಮ್ಮಾಮ್, ಹಂಝ ಸೂರಿಕುಮೇರು, ಹಸೈನ್ ಟೈಲರ್, ಫಾಝಿಲ್ ಸೂರಿಕುಮೇರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಲೀಂ ಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!