Sunday, June 21, 2026
spot_imgspot_img
spot_imgspot_img

ಮಾಣಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಮಾಣಿ ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ವತಿಯಿಂದ ಪ್ರೋತ್ಸಾಹ ಧನ ವಿತರಣೆ

- Advertisement -
- Advertisement -

ಮಾಣಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಮಾಣಿ ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ವತಿಯಿಂದ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಬಿ.ಜೆ.ಪಿ ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಂಡಲ ಸಹಕಾರ ಪ್ರಕೊಷ್ಠ ಸಂಚಾಲಕ ಜಯರಾಮ್ ರೈ ಉಪಸ್ಥಿತಿಯಲ್ಲಿ ಮಾಣಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ ರವರು ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ಬೋಳಂತೂರು ಶಕ್ತಿಕೇಂದ್ರದ ಬಿ.ಜೆ.ಪಿ ಹಿರಿಯ ಕಾರ್ಯಕರ್ತ ಸುರೇಶ್ ಅವರ ಮಗಳು ಕು /ತೇಜಶ್ರೀ ಯವರಿಗೆ ಪ್ರೊಸ್ತಾಹಕವಾಗಿ ಧನ ಸಹಾಯ ಮಾಡಿದರು.

ಅನಂತಾಡಿ ಗ್ರಾಮದ ದೊಡ್ಡ ಬೆಟ್ಟು ಎಂಬಲ್ಲಿಯ ಬಿಜೆಪಿ ಹಿರಿಯ ಕಾರ್ಯಕರ್ತ ಮೋನಪ್ಪ ಎಂಬವರು ಇತ್ತೀಚೆಗೆ ಸಾವನ್ನಪ್ಪಿದ್ದು ಅವರ ಉತ್ತರ ಕ್ರೀಯೆ ನಿಮಿತ್ತ ಅವರನ್ನು ಬೇಟಿ ಮಾಡಿ ಸಹಾಯ ಧನ ನೀಡಿದರು.

ಈ ಸಂದರ್ಭದಲ್ಲಿ ಮಾಣಿ ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ,ವೀರಕಂಭ ಶಕ್ತಿ ಕೇಂದ್ರ ಪ್ರಮುಖ ಜಯ ಪ್ರಸಾದ್, ಅನಂತಾಡಿ ಪಂಚಾಯತ್ ಅಧ್ಯಕ್ಷೆ ಸುಜಾತ, ಬೋಳಂತೂರು ಶಕ್ತಿ ಕೇಂದ್ರ ಪ್ರಮುಖ ಉಮೇಶ್ ಕುಲಾಲ್, ಬೂತ್ ಕಾರ್ಯದರ್ಶಿ ಮಹೇಶ್ ಬೋಳಂತೂರು ಬಿಜೆಪಿ ಹಿರಿಯ ರಾಕೋಡಿ ಈಶ್ವರ್ ಭಟ್, ಪಕ್ಷದ ಹಿರಿಯರಾದ ಆನಂದ್ ಪಿಲಿಚಂಡ್ಡಿಗುಡ್ಡ, ಸೊಸೈಟಿ ನಿರ್ದೇಶಕ ವೆಂಕಟೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

- Advertisement -

Related news

error: Content is protected !!