Thursday, April 25, 2024
spot_imgspot_img
spot_imgspot_img

ಜನ ಪ್ರತಿನಿಧಿಗಳಿಗೆ ಮಾದರಿಯಾದ ಮಾಣಿ ಗ್ರಾಮ ಪಂಚಾಯತ್ ಸದಸ್ಯರು

- Advertisement -G L Acharya panikkar
- Advertisement -

ಮಾಣಿ: ಸೂರಿಕುಮೇರು ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್ ತೆರವುಗೊಳಿಸುವವರೆಗೂ ತಮ್ಮ ಕಾರ್ಯಕರ್ತರೊಂದಿಗೆ ಸ್ಥಳದಲ್ಲೇ ಇದ್ದು ಮಾಣಿ ಗ್ರಾಮ ಪಂಚಾಯತ್ ಸದಸ್ಯರುಗಳು ಸಹಕರಿಸುತ್ತಿದ್ದರು.

ಅಪಘಾತಕ್ಕೆ ಕಾರಣ ಹೆದ್ದಾರಿ ಇಲಾಖೆಯು ಡಾಮರೀಕರಣಗೊಂಡ ಹೆದ್ದಾರಿಯ ರಸ್ತೆಯ ಇಕ್ಕೆಲಗಳಿಗೆ ಮಣ್ಣು ಹಾಕದೇ ಇರುವುದರಿಂದ ರಸ್ತೆಯ ಪಾರ್ಶ್ವವು ಅಪಾಯಕಾರಿ ಎತ್ತರದಲ್ಲಿರುವುದುದರಿಂದ ಘಟನೆ ಸಂಭವಿಸಿದೆ.

ಇದನ್ನು ಗಮನಿಸಿದ ಮಾಣಿ ಗ್ರಾಮ ಪಂಚಾಯತ್ ಸದಸ್ಯರುಗಳು ಟ್ಯಾಂಕರ್ ತೆರವು ಮಾಡಿದ ಕೂಡಲೇ ಜೆಸಿಬಿಯನ್ನು ತರಿಸಿ ಅಪಾಯಕಾರಿ ಇರುವ ರಸ್ತೆಗಳ ಇಕ್ಕೆಲಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

ಈ ಮೂಲಕ ಜನರ ಪ್ರಶಂಸೆಗೆ ಪಾತ್ರವಾಗಿದ್ದು ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀಪ್ ಕುಮಾರ್ ಶೆಟ್ಟಿ ಮಾಣಿ ನೇತೃತ್ವದಲ್ಲಿ ಪಂಚಾಯತ್ ಸದಸ್ಯರಾದ ಮೆಲ್ವಿನ್ ಮಾರ್ಟಿಸ್, ಬಾಲಕೃಷ್ಣ ಶೆಟ್ಟಿ, ಇಬ್ರಾಹಿಂ ರೊಂದಿಗೆ ಕಾರ್ಯಕರ್ತರು ಕೂಡಾ ಬಹಳ ಉತ್ಸಾಹದಿಂದ ಸಹಕರಿಸುತ್ತಿದ್ದರು.

- Advertisement -

Related news

error: Content is protected !!