Friday, April 19, 2024
spot_imgspot_img
spot_imgspot_img

ಸತ್ಯ ಪ್ರಾಮಾಣಿಕತೆಯು ಬದುಕಿನಲ್ಲಿ ಯಶಸ್ಸು ಒದಗಿಸುತ್ತದೆ : ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ

- Advertisement -G L Acharya panikkar
- Advertisement -

ಬಂಟ್ವಾಳ: ಸತ್ಯ ನೀತಿ ಪ್ರಾಮಾಣಿಕತೆಯು ಬದುಕಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಶೇಖ್ ಜೀಲಾನಿ(ರ)ರವರ ಜೀವನ ಚರಿತ್ರೆಯು ನಮಗೆ ಬಹಳಷ್ಟು ಪಾಠ ಒದಗಿಸುತ್ತದೆ ಎಂದು ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಹೇಳಿದರು.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಹಳೀರ ಇಬ್ರಾಹಿಂ ಮುಸ್ಲಿಯಾರ್ ರವರ ನಿವಾಸದಲ್ಲಿ ನಡೆದ ಮಹ್‌‌ಳರತುಲ್ ಬದ್ರಿಯಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಅಶ್ರಫ್ ಸಖಾಫಿ ಸೂರಿಕುಮೇರು ದುಆ ನಡೆಸಿಕೊಟ್ಟರು. ಪಕ್ಷಿಕೆರೆ ಬದ್ರಿಯಾ ಮಸೀದಿಯ ಖತೀಬ್ ಉಸ್ತಾದ್ ಆದಂ ಅಮಾನಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಜ್ಲಿಸ್‌ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಸೆಂಟರ್ ನಾಯಕರಾದ ಸುಲೈಮಾನ್ ಸೂರಿಕುಮೇರು,ಸ್ವಾದಿಕ್ ಪೇರಮೊಗರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಇಸಾಕ್ ಮುಸ್ಲಿಯಾರ್ ಕುಟ್ಯಾಡಿ,ಕರೀಂ ನೆಲ್ಲಿ,ಹಂಝ ಕಾಯರಡ್ಕ,ಫತ್ತಾಹ್ ಹಳೀರ,ಲತೀಫ್ ಹಳೀರ ಇಮ್ರಾನ್,ನೌಶಾದ್ ಉಮರ್ ಸೂರಿಕುಮೇರು,ಹಮೀದ್ ಮಾಣಿ,ಅಬ್ಬಾಸ್ ಪಟ್ಲಕೋಡಿ,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಎಸ್ಸೆಸ್ಸೆಫ್ ಅಧ್ಯಕ್ಷ ಮುಬಶ್ಶಿರ್ ಸೂರಿಕುಮೇರು ಧನ್ಯವಾದಗೈದರು.

- Advertisement -

Related news

error: Content is protected !!