Tuesday, May 7, 2024
spot_imgspot_img
spot_imgspot_img

ಮಂತ್ರಾಲಯ ಮಠದಲ್ಲಿ ಇಂದಿನಿಂದ ಡಿಸೆಂಬರ್​ 1 ರವರೆಗೆ ಪವಿತ್ರ ತುಂಗಭದ್ರಾ ಪುಷ್ಕರ

- Advertisement -G L Acharya panikkar
- Advertisement -

ರಾಯಚೂರು: ಮಂತ್ರಾಲಯ ಮಠದಲ್ಲಿ ಇಂದಿನಿಂದ ಡಿಸೆಂಬರ್​ 1 ರವರೆಗೆ 12 ದಿನಗಳ ಕಾಲ ಪವಿತ್ರ ತುಂಗಭದ್ರಾ ಪುಷ್ಕರ​ ಆಚರಿಸಲಾಗುತ್ತಿದೆ.ಬೆಳಗ್ಗೆ 7 ಗಂಟೆಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ನೆರವೇರಿದೆ.

ಶ್ರೀರಾಯರ ಮಠದಿಂದ ತುಂಗಭದ್ರಾ ನದಿವರೆಗೆ ಮೂಲರಾಮ ದೇವರ ಮೆರವಣಿಗೆ, ಮಠದಲ್ಲಿ ಪ್ರಹ್ಲಾದ ರಾಜರ ಉತ್ಸವ ನೆರವೇರಿದೆ. ಕರ್ನೂಲು ಜಿಲ್ಲಾಡಳಿತ ಸ್ನಾನ ಘಟ್ಟಗಳಲ್ಲಿ ಪುಣ್ಯ ಸ್ನಾನಕ್ಕೆ ನಿಷೇಧ ಹೇರಿದ್ದು, ತುಂಗಭದ್ರಾ ನದಿ ತೀರದಲ್ಲಿ ಕೇವಲ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 

ಮಠಕ್ಕೆ ದೇಶದ ಮೂಲೆಮೂಲೆಯಿಂದ  ಸಾವಿರಾರು ಜನ ಭಕ್ತರು ಆಗಮಿಸಿದ್ದಾರೆ.  ತುಂಗಭದ್ರಾ ಪುಷ್ಕರ್​ ಹಿನ್ನೆಲೆ 12 ದಿನಗಳ ಕಾಲ ಮಠದಲ್ಲಿ ಹಲವು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

- Advertisement -

Related news

error: Content is protected !!