Thursday, May 2, 2024
spot_imgspot_img
spot_imgspot_img

ಪ್ರೀತಿಸಿದ ಯುವತಿಗೆ ಮದುವೆ; ವಿಷಯ ತಿಳಿದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ..!!

- Advertisement -G L Acharya panikkar
- Advertisement -

ಪ್ರೀತಿಸಿದ ಯುವತಿ ಬೇರೊಬ್ಬ ಯುವಕನ ಜೊತೆ ವರಿಸಲು ಮುಂದಾದ ವಿಷಯ ತಿಳಿದ ಪ್ರಿಯಕರ ಮನನೊಂದು ಅರಬ್ಬೀ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿಯನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ನಡೆದಿದೆ.

ಬಿಪ್ಲಾಬ್ ಮಂಡಲ್ ರಕ್ಷಣೆಗೊಳಗಾದ ಯುವಕ. ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕ ಬಿಪ್ಲಾಬ್, ಕಾರವಾರದ ವೈದ್ಯಕೀಯ ಕಾಲೇಜಿನ ಎರಡನೇ ಹಂತದ ಕಟ್ಟಡ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದ. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬರನ್ನು ಮದುವೆಯಾಗಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಯುವಕ ಸಮುದ್ರಕ್ಕೆ ಹಾರಿದ್ದನ್ನು ಕಂಡ ಲೈಫ್‌ಗಾರ್ಡ್ ಮತ್ತು ಪ್ರವಾಸಿಮಿತ್ರ ಸಿಬ್ಬಂದಿ, ತಕ್ಷಣ ಆತನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಯುವಕನಿಗೆ ಬುದ್ಧಿಮಾತು ಹೇಳಿ ಯುವಕನನ್ನು ಕಳುಹಿಸಿದ್ದಾರೆ.

- Advertisement -

Related news

error: Content is protected !!