Saturday, April 27, 2024
spot_imgspot_img
spot_imgspot_img

ವರನನ್ನು ಹುಡುಕಿ ಕೊಡುವಲ್ಲಿ ವಿಫಲವಾದ ಮ್ಯಾಟ್ರಿಮೋನಿಯಲ್ ಸೈಟ್; ಹುಡುಗಿ ತಂದೆಗೆ ಪರಿಹಾರ ಧನವಾಗಿ 22000 ರೂ..!

- Advertisement -G L Acharya panikkar
- Advertisement -

ನವದೆಹಲಿ: ವರನನ್ನು ಹುಡುಕಿ ಕೊಡುವಲ್ಲಿ ವಿಫಲವಾದ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ವೊಂದು ತನ್ನ ಗ್ರಾಹಕನಿಗೆ 22,000 ರೂ. ಪರಿಹಾರ ಧನ ನೀಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಪಂಚಕುಲ ನಿವಾಸಿ ಪವನ್ ಕುಮಾರ್ ಶರ್ಮಾ ತನ್ನ ಮಗಳಿಗೆ ವರನನ್ನು ಹುಡುಕಿ ಕೊಡುವಂತೆ ದೆಹಲಿ ಮೂಲದ ಸೈಕೋರಿಯನ್ ಹೆಸರಿನ ಮ್ಯಾಟ್ರಿಮೋನಿಯಲ್ ವೆಬ್ ಸೈಟ್‍ ಮೊರೆ ಹೋಗಿದ್ದರು. ಇದಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಶುಲ್ಕದ ರೂಪದಲ್ಲಿ 80,000 ರೂ. ಪಾವತಿಸಿದ್ದರು. ಆದರೆ, ಇದುವರೆಗೆ ತಮ್ಮ ಮಗಳಿಗೆ ಸರಿಹೊಂದುವಂತಹ ವರನನ್ನು ಮ್ಯಾಟ್ರಿಮೋನಿಯಲ್ ಸೈಟ್ ಹುಡುಕಿಕೊಡುವಲ್ಲಿ ವಿಫಲವಾಗಿದೆ ಎಂದು ಪವನ್ ಆರೋಪಿಸಿದ್ದಾರೆ. ಹಾಗೂ ತಮ್ಮ ಹಣವನ್ನು ವಾಪಸ್ ಮಾಡುವಂತೆ ಸಾಕಷ್ಟು ಬಾರಿ ಪತ್ರ ಬರೆದು ಒತ್ತಾಯಿಸಿದ್ದಾರೆ.

driving

ಪವನ್ ಕುಮಾರ್ ಅವರ ಮಗಳು ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರಿಗೆ ಸೂಕ್ತವಾದ ಹುಡುಗನನ್ನು ಸೈಕೋರಿಯನ್ ವೆಬ್ ಸೈಟ್ ಹುಡುಕಿಕೊಟ್ಟಿಲ್ಲ. ಈ ಹಿನ್ನೆಲೆ ಪವನ್ ಕುಮಾರ್ ಅವರು ತಮ್ಮ ಹಣ ವಾಪಸ್ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡ ಮ್ಯಾಟ್ರಿಮೋನಿಯಲ್‍ನವರು ಕ್ಯಾರೆ ಎಂದಿರಲಿಲ್ಲ. ಕೊನೆಗೆ ಪವನ್ ಕುಮಾರ್ ಜಿಲ್ಲಾ ಗ್ರಾಹಕರ ರಕ್ಷಣಾ ಕೋರ್ಟ್ ಮೆಟ್ಟಿಲೇರಬೇಕಾಯಿತು.

ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ರಕ್ಷಣಾ ಕೋರ್ಟ್, ಸೂಕ್ತ ಸೇವೆ ನೀಡದ ಹಿನ್ನೆಲೆ ಪವನ್ ಕುಮಾರ್ ಅವರಿಗೆ ಶುಲ್ಕದ 80 % (64,000) ಹಣ ಹಾಗೂ ಪರಿಹಾರದ ರೂಪದಲ್ಲಿ 15,000 ಮತ್ತು ಮೊಕದ್ದಮೆಯ ಚಾರ್ಜ್ 7000 ರೂ. ಪಾವತಿಸುವಂತೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಹೇಳಿದೆ.

- Advertisement -

Related news

error: Content is protected !!