Monday, May 6, 2024
spot_imgspot_img
spot_imgspot_img

ಮ್ಯಾರಥನ್ ನಲ್ಲಿ ದಾಖಲೆ ನಿರ್ಮಿಸಿದ ಸಾಧಕ ‘ಹರೀಶ ಕರ್ಕೇರ’

- Advertisement -G L Acharya panikkar
- Advertisement -

ಸಾಧನೆ ಎಂಬ ಶಿಖರವನ್ನು ಒಂದು ಎರಡು ದಿನಗಳಲ್ಲಿ ಏರಲು ಸಾಧ್ಯವಿಲ್ಲ.ಒಂದು ವೇಳೆ ಅಲ್ಪ ಸಮಯದಲ್ಲಿ ಸಾಧನೆ ನಡೆದರೆ ಆ ಸಾಧನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ.ಸಾಧನೆಯ ಹಾದಿ ಯಾವಾಗಲೂ ಕಠಿಣವಾಗಿರಬೇಕು, ಶ್ರಮವಿರಬೇಕು,ಹಲವಾರು ದಿನಗಳ ಪರಿಶ್ರಮ ಎದ್ದು ಕಾಣಬೇಕು.ಆಗ ನಿಜವಾದ ಸಾಧನೆಗೆ ಬೆಲೆ ಸಿಗೊದು ಆದಕ್ಕಾಗಿಯೇ ಹಿರಿಯರು ಹೇಳಿರೋದು ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ.ಇದೇ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಮ್ಯಾರಥನ್ ಓಟಗಾರ ‘ಹರೀಶ ಕರ್ಕೇರ’.

ಇವರ ಜೀವನದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಣಾಜೆ ಗ್ರಾಮದ ಮಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ ಮತ್ತು ಮೋಹಿನಿ ದಂಪತಿಯ ಮುದ್ದಿನ ಮಗನಾಗಿ ಜನಿಸಿ ತಂದೆ ತಾಯಿಯ ಪ್ರೋತ್ಸಾಹದ ಜೊತೆ ಸಾಧನೆಯ ಹಾದಿ ಹಿಡಿದು ನಡೆದವರು.ಪ್ರಸ್ತುತ ಬೆಂಗಳೂರಿನ ಟೈಟಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಧನೆಯಲ್ಲಿ ಯಶಸ್ಸು ಕಾಣಲು ಇಂತಹದೇ ನಿರ್ದಿಷ್ಟ ಕ್ಷೇತ್ರ ಬೇಕೆಂಬ ಅಗತ್ಯವಿಲ್ಲ.ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಮತ್ತು ಪ್ರೀತಿ ಇರಬೇಕು.ಆಗ ಸಾಧನೆಯ ಹಾದಿ ಸುಲಭವಾಗಿ ಕಾಣುತ್ತದೆ ಅದೇ ರೀತಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ.ಇದೇ ರೀತಿಯ ಸಾಧನೆಯ ಹಾದಿ ಹಿಡಿದ ಹರೀಶ್ ಕರ್ಕೇರ ಅವರು ಆರಿಸಿದ್ದು ಕ್ರೀಡಾ ಕ್ಷೇತ್ರ.

ಇವರ ಸಾಧನೆಯನ್ನು ಗಮನಿಸುತ್ತ ಹೋದಂತೆ ಇವರು ಟಾಟಾ ಮುಂಬೈ ನಡೆಸಿಕೊಡುವ ಏಷ್ಯಾದ_ನಂ.1 ಮ್ಯಾರಥನ್ ನಲ್ಲಿ ಭಾಗವಹಿಸಿ 42 ಕಿಲೋಮೀಟರ್ ದೂರವನ್ನು 4 ಗಂಟೆ 16 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದವರು,ಕಳೆದ ಬಾರಿ 42 ಕಿಲೋಮೀಟರ್ ದೂರವನ್ನು 4 ಗಂಟೆ 27 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು,ಹಾಗೆಯೇ ಬೆಂಗಳೂರು ಮ್ಯಾರಥಾನ್ ನಲ್ಲಿ 21 ಕಿಲೋಮಿಟರ್ ಗಳನ್ನು 2 ಗಂಟೆ 01 ನಿಮಿಷಗಳಲ್ಲಿ, ಟಿ.ಸಿ.ಎಸ್ ಬೆಂಗಳೂರು ನಡೆಸಿಕೊಡುವ 10 ಕಿಲೋಮಿಟರ್ ಅನ್ನು 58 ನಿಮಿಷಗಳಲ್ಲಿ, ಎಸ್.ಬಿ.ಐ ಗ್ರೀನ್ ಮ್ಯಾರಥಾನ್ ಬೆಂಗಳೂರು ಇಲ್ಲಿ 2 ಗಂಟೆಯಲ್ಲಿ ಕ್ರಮಿಸಿದವರು ಹೀಗೆ ಮ್ಯಾರಥಾನ್ ನಲ್ಲಿ ಹತ್ತು ಹಲವಾರು ದಾಖಲೆ ನಿರ್ಮಿಸಿದ ಕೀರ್ತಿ ಇವರದ್ದು ಇವರ ಈ ಸಾಧನೆಯ ಹಿಂದೆ ಕಂಪೆನಿಯ ಎಂ.ಡಿ ಗಳಾದ ಭಾಸ್ಕರ್ ಭಟ್ ಹಾಗೂ ವೆಂಕಟರಮಣ್ ಅವರ ಸಹಕಾರ ತುಂಬಾ ಇದೆ ಎಂದು ನೆನಪಿಸಿಕೊಳ್ಳುತ್ತಾರೆ ಹರೀಶ್. ಇನ್ನು ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಡಬೇಕು ಎಂಬ ಇವರ ಕನಸು ನನಸಾಗಲಿ.

- Advertisement -

Related news

error: Content is protected !!