- Advertisement -
- Advertisement -
ಬೆಂಗಳೂರು: ನನ್ನ ಹೆಸರು ಬಳಸಿಕೊಂಡು ಸಂಘ, ಸಂಸ್ಥೆಗಳನ್ನು ಕಟ್ಟುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ಹೆಸರನ್ನು ಬಳಸಿಕೊಂಡು ಯಾರೂ ಕೂಡ ಅಭಿಮಾನಿಗಳ ಸಂಘ, ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳನ್ನು ಕಟ್ಟುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಸದ್ಯ ಅಸ್ತಿತ್ವದಲ್ಲಿರುವ ಎಂ.ಎಸ್ ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘವನ್ನು ಹೊರತುಪಡಿಸಿ ಉಳಿದ ಸಂಘಗಳನ್ನು ಈ ಕ್ಷಣದಿಂದಲೇ ವಿಸರ್ಜಿಸಬೇಕು . ಒಂದು ವೇಳೆ ನನ್ನ ಹೆಸರು ಹಾಗೂ ನನ್ನ ಸಹೋದರ ಡಿ.ಕೆ ಸುರೇಶ್ ಹೆಸರಿನ ಸಂಘ ಸಂಸ್ಥೆಗಳ ಮೂಲಕ ಯಾವುದಾರೂ ಚಟುವಟಿಕೆ ನಡೆದರೆ ಅಂತವಹ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
- Advertisement -